Breaking News

ಮೈಸೂರಲ್ಲಿ ದಶಕಗಳ ಹಳೆಯ ಸೇತುವೆ ಕುಸಿತ – ನಾಲೆಗೆ ಬಿದ್ದ ಭತ್ತ ಸಾಗಿಸುತ್ತಿದ್ದ ಲಾರಿ.!

ಸರಗೂರು ತಾಲೂಕಿನ ಬಲದಂಡೆ ನಾಲೆ ಸೇತುವೆ ಕುಸಿದ ಪರಿಣಾಮ ಭತ್ತ ಸಾಗಿಸುತ್ತಿದ್ದ ಲಾರಿಯೊಂದು ನಾಲೆಗೆ ಬಿದ್ದಿರುವ ಘಟನೆ ನಡೆದಿದ್ದು, ಅದೃಷ್ಟವಾಶತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಮೈಸೂರಿನ ಇಟ್ನ ಗ್ರಾಮದಿಂದ ತಮಿಳುನಾಡಿಗೆ ಭತ್ತ ತುಂಬಿಕೊಂಡು ಹೋಗುತ್ತಿದ್ದ TN 52 8333 ನಂಬರ್ ಪ್ಲೇಟ್ ನ ಲಾರಿಯೊಂದು ಸೇತುವೆ ಮೇಲೆ ಹೋಗುತ್ತಿದ್ದಾಗ ಏಕಾಏಕಿ ಸೇತುವೆ ಕುಸಿದು ಬಿದ್ದಿದ್ದು, ಭತ್ತ ಸಾಗಿಸುತ್ತಿದ್ದ ಲಾರಿ ನಾಲೆಗೆ ಬಿದ್ದಿದೆ.

ದಶಕಗಳ ಹಳೆಯ ಸೇತುವೆ ಇದಾಗಿದ್ದು, ರಸ್ತೆಯಲ್ಲಿ ಯಾವ ವಾಹನಗಳು ಪ್ರಯಾಣಿಸದಂತೆ ಪೊಲೀಸರು ಬ್ಯಾರಿಗೇಟ್ ಹಾಕಿದ್ದರು. ಆದರೆ ರಾತ್ರಿಯ ವೇಳೆ ಗೇಟ್ ಸರಿಸಿ ಲಾರಿಯನ್ನು ಸೇತುವೆ ಮೇಲೆ ಹೋಗಿದ್ದಾರೆ. ಪರಿಣಾಮ ತೂಕ ಜಾಸ್ತಿಯಾಗಿ ಸೇತುವೆ ಕುಸಿದಿದೆ ಎಂದು ಕಬಿನಿ ಜಲಾಶಯದ ಕಾರ್ಯಪಾಲಕ ಅಭಿಯಂತರ ಕೆ.ಉಷಾ ತಿಳಿಸಿದರು.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *