ದೂರದ ಊರಿನಿಂದ ಬಂದ ಸಾರಿಗೆ ಬಸ್ ಇಂದು ಮುಷ್ಕರದ ಹಿನ್ನಲೆ ಕೆಎಸ್‌ಆರ್‌ಟಿಸಿ ಬಸ್ ಅನ್ನು ಸ್ಟಾಂಡ್ ಬದಲಿಗೆ ಡಿಪೋಗೆ ತಂದು ನಿಲ್ಲಿಸಿದ್ದಾನೆ. ಬಳಿಕ ಮುಷ್ಕರದ ಹಿನ್ನಲೆ ಬಸ್ ಇಲ್ಲೇ ಲಾಸ್ಟ್ ನೀವೆಲ್ಲ ಇಳಿಯಿರಿ ಎಂದು ಪ್ರಯಾಣಿಕರಿಗೆ ಹೇಳಿದ್ದಾರೆ.ಮಹಿಳೆ ಶ್ರೀನಿವಾಸಪುರ ಮಾರ್ಗವಾಗಿ ಕೋಲಾರ ನಗರಕ್ಕೆ ಆಗಮಿಸಲು ಟಿಕೆಟ್ ಪಡೆದಿದ್ದರು. ಆದರೆ ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನ ಬಿಡದೆ, ಬಸ್ ಡಿಪೋ ಬಳಿ ಚಾಲಕ ನಿಲ್ಲಿಸಿ ಬಸ್ ಮುಂದೆ ಹೋಗಲ್ಲ ಎಂದು ಪ್ರಯಾಣಿಕರನ್ನ ಚಾಲಕ ಮತ್ತು ನಿರ್ವಾಹಕ ಕೆಳಕ್ಕೆ ಇಳಿಸಿದ್ದಾರೆ.
ಇತ್ತ ಚಾಲಕ ಹಾಗೂ ನಿರ್ವಾಹಕನ ಮಾತಿಗೆ ಏನು ಹೇಳಬೇಕು ಎಂದು ಗೊತ್ತಾಗದೆ ಪ್ರಯಾಣಿಕರು ಬಸ್ ನಿಂದ ಇಳಿದು ನಡೆದುಕೊಂಡು ಸಾಗಿದ್ದಾರೆ. ಈ ವೇಳೆ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಕಿಡಿಕಾರಿದ್ದು, ಫ್ರೀಂ ಸ್ಕೀಂ ಬೇಡ ಆಗಿತ್ತು, ಇದರಿಂದ ಸರ್ಕಾರಕ್ಕೆ ಹೊರೆಯಾಗ್ತಿದೆ. ಸರ್ಕಾರ ಕೂಡಲೇ ಸಾರಿಗೆ ನೌಕರರ ಕಷ್ಟಕ್ಕೆ ಸ್ಪಂದಿಸಲಿ ಎಂದು ಮಹಿಳೆ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

