ಶಿವಮೊಗ್ಗ:ಫೇಸ್‌ಬುಕ್‌ನಲ್ಲಿ ಪರಿಚಿತ ವ್ಯಕ್ತಿಯೊಬ್ಬ ಹಣಕಾಸಿನ ಸಹಾಯ ಮಾಡುವುದಾಗಿ ನಂಬಿಸಿ ತೀರ್ಥಹಳ್ಳಿಯ ಮಹಿಳೆಗೆ ಬರೋಬ್ಬರಿ 12.52 ಲಕ್ಷ ರೂ. ವಂಚಿಸಿದ್ದಾನೆ. ಫೇಸ್‌ಬುಕ್‌ನಲ್ಲಿ ಡಾ. ಅಲೆಕ್ಸ್ ಚಾರ್ಲ್ಸ್ ಎಂಬಾತ 44 ವರ್ಷದ ಮಹಿಳೆಗೆ ಫೇಸ್‌ಬುಕ್ ಮೂಲಕ ಪರಿಚಿತನಾಗಿದ್ದ. 110,000 ವಿದೇಶದ ನಂಬರ್‌ನಿಂದ ಮೆಸೇಜ್ ಮಾಡಿ ಹಣಕಾಸಿನ ಸಹಾಯ ಮಾಡುವುದಾಗಿ ನಂಬಿಸಿ ಮಹಿಳೆಯ ಯೂನಿಯನ್ ಬ್ಯಾಂಕ್‌ನ ಮಾಹಿತಿ ಪಡೆದಿದ್ದ. ಬಳಿಕ ಕ್ಯಾಪಿಟಲ್ ಸ್ಟರ್ಲಿಂಗ್ ಯುಕೆ ಬ್ಯಾಂಕ್‌ನ ಮ್ಯಾನೇಜರ್ ಎಂದು ಹೇಳಿಕೊಂಡು ಕರೆ ಮಾಡಿದ್ದ ವಂಚಕರು, ಡಾ. ಅಲೆಕ್ಸ್ ಚಾರ್ಲ್ಸ್ ಅವರು ನಿಮ್ಮ ಖಾತೆಗೆ 110,000 ಪೌಂಡ್ಸ್ (ವಿದೇಶಿ ಕರೆನ್ಸಿ) ವರ್ಗಾವಣೆ ಮಾಡಿದ್ದಾರೆ. ಆದರೆ ನಿಮ್ಮದು ಉಳಿತಾಯ ಖಾತೆ ಆದ ಕಾರಣ ಹಣವನ್ನು ರೂಪಾಯಿಗೆ ವರ್ಗಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದರು. ಅಷ್ಟೋ ಪೌಂಡ್ಸ್ ಹಣವನ್ನು ನಿಮ್ಮ ವಿಳಾಸಕ್ಕೆ ಕೋರಿಯರ್ ಮಾಡುತ್ತೇವೆಂದು ಹೇಳಿ ಅದಕ್ಕಾಗಿ ಕೆಲಸ ಸೇವಾಶುಲ್ಕ ಭರಿಸಬೇಕೆಂದು ತಿಳಿಸಿದ್ದ. ಆತನ ಮಾತು ನಂಬಿದ ಮಹಿಳೆಯು ಹಂತ ಹಂತವಾಗಿ 12,51,299 ರೂ. ವರ್ಗಾವಣೆ ಮಾಡಿದ್ದರು. ಪುನಃ ಹಣಕ್ಕೆ ಬೇಡಿಕೆ ಇಟ್ಟಾಗ ಮೋಸ ಹೋಗಿರುವುದು ಅರಿವಾಗಿದ್ದು, ಶಿವಮೊಗ್ಗ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

