ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಚೌಡಳ್ಳಿ ವಿರಕ್ತ ಮಠದ ಮಠಾಧೀಪತಿ ಮುಸ್ಲಿಂ ವ್ಯಕ್ತಿ ಎನ್ನುವ ಹಿನ್ನಲೆಯಲ್ಲಿ ಗ್ರಾಮಸ್ಥರು ನಿಜಲಿಂಗ ಸ್ವಾಮಿಜಿ ಎನ್ನುವ ಹೆಸರಿನ ಮುಸ್ಲಿಂ ವ್ಯಕ್ತಿಯನ್ನು ಪೀಠದಿಂದ ಕೆಳಗಿಳಿಸಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.ನನ್ನ ಮಗ ನನ್ನ ಪಾಲಿಗೆ ಸತ್ತಿದ್ದಾನೆ ಎಂದುಕೊಂಡು ಬಿಟ್ಟಿದ್ದೇವೆ.ಈಗಲೂ ಅವನು ಮರಳಿ ಮನೆಗೆ ಬಂದರೆ ಸ್ವೀಕರಿಸುವುದಿಲ್ಲ. ನಾವು ಹುಟ್ಟಿ ಬೆಳೆದ ಮುಸ್ಲಿಂ ಧರ್ಮ ಬಿಟ್ಟು ಬೇರೆ ಧರ್ಮದ ದಾರಿ ಹಿಡಿದಿದ್ದಾನೆ.ಬೇರೆ ಧರ್ಮ ಪಾಲಿಸ್ತಿದಾನೆ ಎಂದ ಮೇಲೆ ಅವನನ್ನು ಮರಳಿ ನಮ್ಮ ಮನೆಗೆ ಸೇರಿಸಿಕೊಳ್ಳುವ ಪ್ರಶ್ನೇಯೇ ಇಲ್ಲ. ನಾನು ತಾಯಿಯಾಗಿ ಒಪ್ಪಿದರೂ ನಮ್ಮ ಜನ ಒಪ್ಪಬೇಕಲ್ಲ.. ಹಾಗಾಗಿ ನಾನು ಮರಳಿ ಮಗ ಎಂದು ಸ್ವೀಕರಿಸಲಾರೆ ಎಂದು ನಿಜಲಿಂಗ ಸ್ವಾಮಿ ಅಲಿಯಾಸ್ ಮೊಹ್ಮದ್ ನಿಸಾರ್ ತಾಯಿ ರೆಹನಾ ಬೇಗಂ ಹೇಳಿಕೆ ನೀಡುತ್ತಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

