Breaking News

ತಾರಸಿಯಿಂದ ಆಯ ತಪ್ಪಿ ಬಿದ್ದು ಸಾವು

ಕುಂದಾಪುರ: ರಾಜಸ್ಥಾನದ ಕರೋಲಿ ಮೂಲದ ಹೇಮೇಂದರ ಸಿಂಗ್‌ (40) ಅವರು ಬಸ್ರೂರಿನಲ್ಲಿ ತಾರಸಿಯಿಂದ ಆಯ ತಪ್ಪಿಬಿದ್ದು ಮೃತಪಟ್ಟಿದ್ದಾರೆ.ಬಸ್ರೂರು ಗ್ರಾಮದ ಮಾರ್ಗೊಳಿಯಲ್ಲಿ ಟೈಲ್ವ್ ಫಿಟ್ಟಿಂಗ್‌ ಕೆಲಸ ಮಾಡಿಕೊಂಡಿದ್ದ ಅವರು ಬಸ್ರೂರಿನ ಬಾಡಿಗೆ ಮನೆಯಲ್ಲಿದ್ದರು. ಮನೆಯ ತಾರಸಿ ಮೇಲೆ ಪೋನ್‌ನಲ್ಲಿ ಮಾತನಾಡುತ್ತಿರುವಾಗ ಆಯತಪ್ಪಿ ಕೆಳಗೆ ಬಿದ್ದರು.ಎತ್ತಿ ಉಪಚರಿಸಿದಾಗ ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ ಕುಂದಾಪುರ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷಿಸಿದ ವೈದ್ಯರು ಮಣಿಪಾಲದ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಗಿದೆಂದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *