ಆಟೋಚಾಲಕನೋರ್ವ ಮದ್ವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಇದೀಗ ಕೈಕೊಟ್ಟಿದ್ದಾನೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾರುಕೇರಿ ನಿವಾಸಿಯಾಗಿರುವ ಆಟೋ ಡ್ರೈವರ್ ಗಣೇಶ್ ಕೃಷ್ಣ ಗೊಂಡ ಎಂಬಾತ, ನೂಝ ನಿವಾಸಿ ಯುವತಿಯೋರ್ವಳನ್ನು ಮದುವೆಯಾಗವುದಾಗಿ ನಂಬಿಸಿ ಲವ್ ಬಲೆಗೆ ಬೀಳಿಸಿಕೊಂಡಿದ್ದಾನೆ . ಬಳಿಕ ಪ್ರೀತಿಯ ನಾಟಕವಾಡಿ ದೈಹಿಕವಾಗಿ ಬಳಿಸಿಕೊಂಡು ಇದೀಗ ಕೈಕೊಟ್ಟಿದ್ದು , ಯುವತಿ ಕಂಗಾಲಾಗಿದ್ದಾಳೆ .ಆರೋಪಿ ಗಣೇಶ ಕೃಷ್ಣ ಗೊಂಡ ಕೊನೆಗೆ ಕಳೆದ ಒಂದು ವಾರದ ಹಿಂದೆ ಬೇರೊಂದು ಯುವತಿಯನ್ನು ಮದುವೆಯಾಗಿದ್ದಾನೆ. ಈ ಹಿನ್ನೆಲೆ ಪ್ರೀತಿಸಿದ ಯುವತಿಮತ್ತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

