Breaking News

ಯುವಕನ ಹಿಂದೆ ಬಿದ್ದು ಹೆಣವಾದ ಮೂರು ಮಕ್ಕಳ ತಾಯಿ!!

ಏಪ್ರಿಲ್ 23ರಂದು ಲಕ್ಷ್ಮೀ ಇಂಗಳಗಿ ಮಹಿಳೆ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನತ್ತಿದ ಪೊಲೀಸರು, ಮೊಬೈಲ್​​ ಕರೆಗಳ ಹಿಸ್ಟರಿ ಜಾಲಾಡಿದಾಗ ಕೊಲೆಯ ಹಿಂದೆ ಪ್ರೇಮ ಕಥೆಯ ವಾಸನೆ ಬಂದಿದೆ. ಲಕ್ಷ್ಮೇಶ್ವರ ಸಿಪಿಐ ನಾಗರಾಜ್ ಮಾಡಳ್ಳಿ ತಂಡ ಚಾಣಾಕ್ಷಣದಿಂದ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಯುವಕಮೊಂದಿಗೆ ಮಹಿಳೆ ಲವ್ವಿಡವ್ವಿ ಹಾಗೂ ಕೊಲೆ ಕಹಾನಿ ಬಯಲಿಗೆ ಬಂದಿದೆ.ಲಕ್ಷ್ಮೀಯನ್ನು ಕಾರಿನಲ್ಲಿ ಮಂಗಳೂರಿಗೆ ಕರೆದುಕೊಂಡು ಹೋಗುವಾಗ ಕೇಬಲ್ ವೈಯರಿನಿಂದ ಕುತ್ತಿಗೆಗೆ ಬಿಗಿದು ಕೊಲೆ‌‌ ಮಾಡಿದ್ದಾರೆ. ನಂತರ ಮೃತ ದೇಹವನ್ನು ಸೂರಣಗಿ ಬಳಿ ಎಸೆದು ಪರಾರಿಯಾಗಿದ್ದರು. ಸದ್ಯ ಪೊಲೀಸರು ಚಾಣಾಕ್ಷಣದಿಂದ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳ ಎಡೆಮುರಿಕಟ್ಟಿದ್ದಾರೆ. ಇನ್ನು ಕಾರು, ಮೊಬೈಲ್, ಕತ್ತು ಹಿಸುಕಲು ಬಳಸಿದ್ದ ಕೇಬಲ್ ವೈರ್​ ಅನ್ನು ವಶಕ್ಕೆ ಪಡೆದು ಆರೋಪಿಗಳ ವಿಚಾರಣೆ ನಡೆಸಿದ್ದಾರೆ.ಇನ್ನು ಮದುವೆ ಮಾಡಿಕೊಂಡು ಸುಂದರ ಜೀವನ ನಡೆಸಬೇಕಾದ ಯುವಕ, ಮಹಿಳೆ ಹಿಂದೆ ಬಿದ್ದು ಇದೀಗ ಜೈಲು ಸೇರಿದ್ದಾನೆ

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *