Breaking News

ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಪೊಲೀಸ್–ಬೈಕ್ ಸವಾರ ಗುದ್ದಾಟ: ಚನ್ನಮ್ಮ ಸರ್ಕಲ್ ಘಟನೆ ವಿಡಿಯೋ ವೈರಲ್ 500 ರೂ.

ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಪೊಲೀಸ್–ಬೈಕ್ ಸವಾರ ಗುದ್ದಾಟ..! ಚನ್ನಮ್ಮ ಸರ್ಕಲ್ ಬಳಿ ಜಗಳದ ವಿಡಿಯೋ ವೈರಲ್ 500 ರೂ. ದಂಡಕ್ಕೆ ವಾಗ್ವಾದ:

ಟ್ರಾಫಿಕ್ ಪೊಲೀಸ್ ಹಾಗೂ ಚಾಲಕ ನಡುವೆ ಮಧ್ಯರಸ್ತೆಯಲ್ಲೇ ಗಲಾಟೆ ಸ್ಕ್ಯಾನ್ ಮಾಡಿ ದಂಡ ಕಟ್ಟಲು ಹೇಳಿದ ಪೊಲೀಸರಿಗೆ ಚಾಲಕ ಆಕ್ರೋಶ..!

ಹುಬ್ಬಳ್ಳಿಯಲ್ಲಿ ಜಗಳದ ದೃಶ್ಯ ವೈರಲ್ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಪೊಲೀಸ್ ಹಾಗೂ ಬೈಕ್ ಸವಾರನ ನಡುವೆ ನಡೆದ ಗುದ್ದಾಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ…

ನಗರದ ಚನ್ನಮ್ಮ ಸರ್ಕಲ್ ಬಳಿ ಬೈಕ್ ಸವಾರನನ್ನು ತಡೆದ ಟ್ರಾಫಿಕ್ ಪೊಲೀಸರು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಳೆಯ ಕೇಸ್ ಇದ್ದುದಾಗಿ ಹೇಳಿ ಚಾಲಕನಿಗೆ 500 ರೂಪಾಯಿ ದಂಡ ವಿಧಿಸಿದ್ದಾರೆ…

ದಂಡದ ಹಣವನ್ನು ಅಲ್ಲೇ ಸಮೀಪದ ಬಟ್ಟೆ ಅಂಗಡಿಯಲ್ಲಿ ಸ್ಕ್ಯಾನ್ ಮಾಡಿ ಕಟ್ಟಲು ಸೂಚಿಸಿದ್ದಾರಂತೆ. ಇದಕ್ಕೆ ಚಾಲಕ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಇಬ್ಬರ ನಡುವೆ ವಾಗ್ವಾದ ಆರಂಭವಾಗಿ, ಬಳಿಕ ಗುದ್ದಾಟದ ಮಟ್ಟಿಗೆ ತಲುಪಿದೆ ಎಂದು ತಿಳಿದುಬಂದಿದೆ…

ಈ ಘಟನೆ ಯಾರೋ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಈಗ ವೈರಲ್ ಆಗಿದೆ. ಆದರೆ ಬಟ್ಟೆ ಅಂಗಡಿಯಲ್ಲಿ ದಂಡದ ಹಣವನ್ನು ಯಾಕೆ ಪಾವತಿಸಲು ಹೇಳಿದ್ದಾರೆ..? ಹಾಗೂ ಈ ಜಗಳಕ್ಕೆ ನಿಜವಾದ ಕಾರಣವೇನು ಎಂಬುದು ಇನ್ನಷ್ಟೇ ಹಿರಿಯ ಅಧಿಕಾರಿಗಳ ತನಿಖೆಯಿಂದ ಬಹಿರಂಗವಾಗಬೇಕಿದೆ.

Share News

About Shaikh BigTv

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *