Breaking News

ಅಮಾಯಕ ಜೀವ ಬಲಿ, ವೈಟ್‌ ಶರ್ಟ್‌ ಧರಿಸಿದ್ದಕ್ಕೆ ವ್ಯಕ್ತಿ ಕೊಲೆ!

ದುಷ್ಕರ್ಮಿಗಳಿಂದ ಹಲ್ಲೆ
ಮೃತ ವ್ಯಕ್ತಿಯನ್ನ ವಡ್ಡರಹಳ್ಳಿ ಗ್ರಾಮದ 34 ವರ್ಷದ ಅರುಣ್‌ ಎಂದು ಗುರುತಿಸಲಾಗಿದ್ದು, ಬೆಂಗಳೂರಿನಲ್ಲಿ ಕ್ಯಾಬ್‌ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಶುಕ್ರವಾರ ರಾತ್ರಿ ಊರಿಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಅಂದರೆ ಆಗಸ್ಟ್‌ 8ರಂದು ಮೃತ ಅರುಣ್‌ ಸ್ನೇಹಿತ ಸೂರ್ಯ, ಸಹೋದರ ಉಮೇಶ್‌ ಹಾಗೂ ಸಂಬಂಧಿ ದೇವರಾಜ್‌ ಜೊತೆಗೆ ಬಾರ್‌ನಲ್ಲಿ ಕುಳಿತು ಕುಡಿಯುತ್ತಿದ್ದ ಸಮಯದಲ್ಲಿ, ಅರುಣ್‌ ಸ್ನೇಹಿತ ಸೂರ್ಯ ಹಳೇ ದ್ವೇಷದ ಹಿನ್ನೆಲೆ ವಿಕಾಸ್‌ ಎನ್ನುವ ವ್ಯಕ್ತಿಯ ಜೊತೆಗೆ ಬಾರ್‌ನಲ್ಲಿ ಜಗಳ ಮಾಡಿದ್ದ. ಸುಮಾರು 2 ವರ್ಷದ ಹಿಂದಿನ ಘಟನೆಯನ್ನ ನೆನೆಸಿಕೊಂಡು ನಿನ್ನೆ ಕಾಲು ಕರೆದುಕೊಂಡು ಹೋಗಿ ಜಗಳ ಮಾಡಿದ್ದ. ಈ ಸಮಯದಲ್ಲಿ ಅರುಣ್‌ ಇಬ್ಬರ ಜಗಳವನ್ನ ಬಿಡಿಸಿ ಪಾರ್ಟಿಯನ್ನ ಮುಂದಿವರೆಸಿದ್ದ. ಆದರೆ ಅಲ್ಲಿಂದ ಹೋಗಿದ್ದ ವಿಕಾಸ್‌ ಈ ಬಗ್ಗೆ ಬೇರೆಯವರಿಗೆ ದೂರು ನೀಡಿದ್ದು, ಅವರನ್ನ ಸೂರ್ಯನ ಕೊಲೆ ಮಾಡಲು ಕಳುಹಿಸಿದ್ದ. ಆದರೆ ಈ ಸಮಯದಲ್ಲಿ ಆದ ಎಡವಟ್ಟೆ ಅಮಾಯಕನ ಜೀವ ತೆಗೆದಿತ್ತು.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *