ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹುಬ್ಬಳ್ಳಿ ಗದಗ್ ರಸ್ತೆಯ ಬಾಜು ಇರುವ ಹಳ್ಳ್ಯಾಳ ಪಾರ್ಕದಲ್ಲಿ ಆಪಾದಿತ ಹಸನ ನಾಯಕ ಈತನು ತನ್ನ ಸ್ಕೂಟಿಯಲ್ಲಿ ಗಾಂಜಾ ಮಾರಾಟ ಮಾಡಲು ಬರುತ್ತಾನೆ ಅಂತ ಖಚಿತ ಮಾಹಿತಿಯ ಮೇರೆಗೆ ಧಾರವಾಡ ಸಿಎನ್ ಪೊಲೀಸ್ ಠಾಣೆಯ ಡಿ ಎಸ್ ಪಿ ರವರ ಶಿವಾನಂದ ಕಟಗಿ ರವರ ನೇತೃತ್ವದಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ್ ಮತ್ತು ಸಿಬ್ಬಂದಿ ಜನರಾದ ಎನ್ ಎಂ ಹೊನ್ನಪ್ಪನವರ್ ನಂದೀಶ ವಡ್ರಾಳೆ ಅಬ್ದುಲ್ ಕಾಕರ, ಮಾಂತೇಶ್ ಮದ್ದೀನ್ ಚೆನ್ನಪ್ಪ ಬಳ್ಳೊಳ್ಳಿ, ನಾಗಪ್ಪ ಸಂಶಿ ಸಿ.ಬಿ.ಜನಗಣ್ಣವರ ಇವರೊಂದಿಗೆ ಸ್ಥಳಕ್ಕೆ ತೆರಳಿ ಅಪಾದಿತ ಹಸನ್ ಜುಬೇರ್ ನಾಯಕ್ ನಾಯಕ್ ಸಾಕಿನ್ ಮಂಟೂರ್ ರಸ್ತೆ ಹುಬ್ಬಳ್ಳಿ ಈತನ ಮೇಲೆ ದಾಳಿ ಮಾಡಿ ಆತನಿಂದ 454 ಗ್ರಾಂ ಗಾಂಜಾವನ್ನು ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿರುತ್ತಾರೆ ಸಂಕೇಶ್ವರ ಮೂಲದ ಇನ್ನೋರ್ವ ಆರೋಪಿ ಹಬೀಬ ಜಮಾದಾರ ಈತನನ್ನು ಈ ದಿವಸ ಬಂದಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಧಾರವಾಡ ಜಿಲ್ಲೆ ರವರು ಶ್ಲಾಘೀಸಿ ಬಹುಮಾನ ಘೋಷಿಸಿರುತ್ತಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

