Breaking News

ವಿಶ್ವ ಅಂಚೆ ದಿನ – ಹುಬ್ಬಳ್ಳಿ ಅಗತ್ಯ ಮೂಲ ಸೌಕರ್ಯಗಳ ಬೇಡಿಕೆ ಹೊತ್ತು ಶೆಟ್ಟರ್ ಗೆ 1 ಸಾವಿರ ಪತ್ರ ಚಳುವಳಿ

ಹುಬ್ಬಳ್ಳಿ; ಪ್ರಧಾನ ಅಂಚೆ ಕಚೇರಿಯ ಅಂಚೆ ಪೆಟ್ಟಿಗೆಯಲ್ಲಿ ಹುಬ್ಬಳ್ಳಿ ವಿವಿಧ ಕಾಲೋನಿ ನಿವಾಸಿಗಳಿಂದ ಹುಬ್ಬಳ್ಳಿಯನ್ನು ಧೂಳು ಮುಕ್ತ ಮತ್ತು ಹಸಿರು ನಗರವನ್ನಾಗಿ ಮಾಡಲು, ತ್ಯಾಜ್ಯ ನಿರ್ವಹಣೆ, ರಸ್ತೆಗುಂಡಿಗಳನ್ನು ತುಂಬುವುದು, ಬೀದಿ ದೀಪಗಳನ್ನು ಅಳವಡಿಸಲು, ಸಮರ್ಪಕ ನೀರು ಪೂರೈಕೆ , ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಸರ್ಕಾರಿ ಮಹಿಳಾ ಪದವಿ ಕಾಲೇಜು ಆರಂಭಿಸುವ, ಯುವಕರಿಗೆ ಉದ್ಯೋಗವಕಾಶ ಕ್ರೀಡಾ ಮೈದಾನ ಮಾಡಲು ,ಮತ್ತು ಅನೇಕ ಇತರಮೂಲ ಸೌಕರ್ಯಗಳ ಬೇಡಿಕೆಯ ಕುರಿತು ಶಾಸಕ ಶ್ರೀ ಜಗದೀಶ್ ಅವರಿಗೆ 1 ಸಾವಿರ ಪತ್ರ ಬರೆಯುವ ಮುಖಾಂತರ ಚಳುವಳಿ ನಡೆಸಲಾಯ್ತು.

ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ನಿವಾಸಿಗಳನ್ನುದ್ದೇಶಿಸಿ ಮಾತನಾಡಿ, 29 ವರ್ಷಗಳಿಂದ ಹುಬ್ಬಳ್ಳಿ ಜನಪ್ರತಿನಿಧಿಯಾಗಿ ವಿವಿಧ ಇಲಾಖೆಗಳಿಗೆ ಸಚಿವರಾಗಿ, ವಿಧಾನಸಭಾ ವಿರೋಧ ಪಕ್ಷದ ನಾಯಕರಾಗಿ, ಕರ್ನಾಟಕ ವಿಧಾನಸಭಾ ಅಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದರು ಕುಡ ಹುಬ್ಬಳ್ಳಿಗೆ ಮೂಲ ಸೌಕಾರ್ಯ ವದಗಿಸಲು ವಿಫಲವಾಗಿರುವುದು ದುರದೃಷ್ಟಕಾರ, ಸಾವಿರ ಪತ್ರ ಪಡೆದುಕೊಂಡಾದರೂ ಶೆಟ್ಟರ್ ಅವರು ಹುಬ್ಬಳ್ಳಿಯ ಅಭಿವೃದ್ಧಿಯ ಬಗ್ಗೆ ಚಿಂತಿಸಲಿ ಎಂದು ರಜತ ಹೇಳಿದರು

ಈ ಸಂಧರ್ಭದಲ್ಲಿ ಉಣಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರೀಫ್ ಗರಗದ, ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಹೂವಪ್ಪ ದಾಯಗೋಡಿ, ಮೋಹನ್ ಹಿರೇಮನಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಾರಾಸ್ಮಾಲ್ ಜೈನ, ರವೀಂದ್ರ ಹರ್ತಿ, ಗೊಪಾಲ ಎನೆಚವಡಿ, ಶಿವಾನಂದ ಮಾಯಕರ್, ಗಂಗಾಧರ್ ದೊಡವಾಡ, ಚಂದ್ರಶೇಖರ್ ಕಲ್ಲೂರ್ , ಸಾದಿಕ್ ಯಕ್ಕುಂಡಿ, ಅನಿಲ ಕುರಟ್ಟಿ, ಸುನಿಲ್ ಮಠಪತಿ, ಉಣಕಲ್ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕಾಶಿಮ ಕೂಡಲಗಿ, ಪ್ರಕಾಶ್ ಮಾಯಕರ್, ವಿದ್ಯಾನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ನಾಯಕ್, ಸಚಿನ ಡೋಣುರ, ಕಾಂಚನಾ ಘಾಟಗೆ, ಬಾಳಮ್ಮ ಜಂಗನವರ್, ಅಕ್ಕಮ್ಮ ಕಂಬಳಿ, ಕಲಾವತಿ ಯತ್ವಾದ, ಸುಮಾ ಮಾಳಗಿ, ರಘುರಾಜ್ ಅರಶಿದ್ಧ, ವಿವೇಕ್ ಮುಸಳೆ, ದೀಪಕ್ ಮೆಹರವಾಡೆ, ಅರುಣ್ ಹಳ್ಳಿಕೇರಿ, ಕಬಿರ್ ಮದರಿ, ಜಸ್ವಂತ ಗಾನಧಾಳ್ .

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *