ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನೂರಾರು ರೈತರು ಹೆಸರು ಫಸಲು ರಾಶಿ ಮಾಡಿ ದರ್ಗಾ ಆವರಣದಲ್ಲಿ ಒಣಗಲು ಹಾಕಿದ್ದರು. ಆದರೆ, ಇಡೀ ರಾತ್ರಿ ಸುರಿದ ಧಾರಾಕಾರ ಮಳೆಗೆ ಪಕ್ಕದಲ್ಲಿದ್ದ ಬೃಹತ್ ಹಳ್ಳ ಉಕ್ಕಿ ಹರಿದು ದರ್ಗಾ ಆವರಣ ಸಂಪೂರ್ಣ ಜಲಾವೃತವಾಗಿದೆ. ಬೆಳೆ ನಷ್ಟದಿಂದ ಅನ್ನದಾತ ಬೇಸರಗೊಂಡಿದ್ದಾನೆ.ವರುಣಾರ್ಭಟಕ್ಕೆ ಬೆಳೆ ಹಾನಿಯಾಗಿ ರೈತರು ಕಂಗಾಲಾಗಿದ್ದು, ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
300 ಕ್ವಿಂಟಲ್‌ಗೂ ಅಧಿಕ ಹೆಸರು ಬೆಳೆ ಸಂಪೂರ್ಣ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟಅನುಭವಿಸಲಾಗಿದೆ. ಇದಲ್ಲದೆ, 94 ಹಳ್ಳಿಗಳಲ್ಲಿ ತೊಗರಿ, ಉದ್ದು, ಹೆಸರು, ಸೋಯಾ, ಹತ್ತಿ ಸೇರಿ ಮುಂಗಾರು ಬೆಳೆಗಳು ಸರ್ವನಾಶವಾಗಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

