ಗಣೇಶೋತ್ಸವ ಹಿನ್ನೆಲೆಯಲ್ಲಿ ಶಿವಾಜಿ ಬ್ಯಾನರ್ ತೆರವಿಗೆ ಪೊಲೀಸರು ಮುಂದಾಗುತ್ತಿದಂತೆ ಗಲಾಟೆ ನಡೆದಿರ್ಯ್ವ ಘಟನೆ ದಾವಣಗೆರೆಯಲ್ಲಿ ನಡೆದಿದೆ.ದಾವಣಗೆರೆ ಜಿಲ್ಲೆಯ ಮಟಕಲ್ಲು ಪ್ರದೇಶದಲ್ಲಿ ಗಣೇಶೋತ್ಸವ ಆಚರಣೆ ಹಿನ್ನೆಲೆಯಲ್ಲಿ ಛತ್ರಪತಿ ಶಿವಾಜಿ ಬ್ಯಾನರ್ ಗಳನ್ನು ತೆರವು ಮಾಡಲು ಪೊಲೀಸರು ಮುಂದಾಗಿದ್ದರು.ಶಿವಾಜಿ ಅಫ್ಜಲ್ ಖಾನ್ ನನ್ನು ಕೊಲ್ಲುವ ಫ್ಲೆಕ್ಸ್ ಅವಳವಡಿಸಲಾಗಿತ್ತು. ಇದು ಕೋಮು ಪ್ರಚೋದನೆಗೆ ಕಾರಣವಾಗುತ್ತದೆ ಎಂದು ಪೊಲೀಸರು ಫ್ಲೆಕ್ಸ್ ತೆರವು ಮಾಡಲು ಮುಂದಾಗಿದ್ದಾರೆ. ಇದಕ್ಕೆ ಹಿಂದೂ ಯುವಕರ ಗುಂಪು ವಿರೋಧ ವ್ಯಕ್ತಪಡಿಸಿದೆ.ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

