ಉಡುಪಿ :ಬೈಕ್ ಉರುಳಿ ಬಿದ್ದು ಸಹ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಣಿಪಾಲ – ಅಲೆವೂರು ರಸ್ತೆಯ ಮಂಚಿ ಇಳಿಜಾರಿನ ತಿರುವಿನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ. ಕಟಪಾಡಿ ನಿವಾಸಿ ಮೋಹನ್ (33) ಮೃತಪಟ್ಟವರು. ಬೈಕ್ ಚಲಾಯಿಸುತ್ತಿದ್ದ ಪ್ರದೀಪ್ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಮೋಹನ್ ಅವರು ಪೊದೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟರು. ರವಿವಾರ ಬೆಳಗ್ಗಿನ ವರೆಗೆ ಈ ಘಟನೆ ಯಾರ ಅರಿವಿಗೆ ಬಂದಿರಲಿಲ್ಲ ಎನ್ನಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

