ಮುಂಬೈನ ಕುರ್ಲಾದ ಖೈರಾನಿ ರಸ್ತೆಯಲ್ಲಿ ನೇತಾಡುತ್ತಿದ್ದ ತಂತಿಯು ಗಣೇಶ ಮೂರ್ತಿಗೆ ತಗುಲಿ ಆರು ಜನರಿಗೆ ವಿದ್ಯುದಾಘಾತವಾಗಿದೆ. ಘಟನೆಯಲ್ಲಿ ಸುಕುಮಾರನ್ ಕುಮಾರನ್ (36) ಮೃತಪಟ್ಟಿದ್ದು, ಇಬ್ಬರು ಬಾಲಕರು ಸೇರಿ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ನಾಂದೇಡ್ ಜಿಲ್ಲೆಯಲ್ಲಿ ಗಡೇಗಾಂವ್‌ನ ನದಿಯೊಂದರಲ್ಲಿ ಮೂವರು ಕೊಚ್ಚಿಕೊಂಡು ಹೋಗಿದ್ದು, ಒಬ್ಬರನ್ನು ರಕ್ಷಿಸಲಾಗಿದೆ. ಉಳಿದ ಇಬ್ಬರ ಪತ್ತೆ ಕಾರ್ಯ ಮುಂದುವರೆದಿದೆ. ನಾಸಿಕ್ ಜಿಲ್ಲೆಯಲ್ಲಿ ನಾಲ್ವರು ಕೊಚ್ಚಿಕೊಂಡು ಹೋಗಿದ್ದು, ಒಬ್ಬರ ಮೃತದೇಹ ಪತ್ತೆಯಾಗಿದೆ. ಜಲಗಾಂವ್‌ನಲ್ಲಿ ನಡೆದ ಪತ್ಯೇಕ ಘಟನೆಗಳಲ್ಲಿ ಮೂವರು ಕೊಚ್ಚಿಕೊಂಡು ಹೋಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

