ದೇವಲ ಗಾಣಗಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಮಾತು ಬಾರದ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿ 18 ವರ್ಷದ ಯುವಕನೊಬ್ಬನನ್ನು ಬಂಧಿಸಲಾಗಿದೆ. ‘ಪಕ್ಕದ ಮನೆಯ ಯುವಕನು ಭಾನುವಾರ ಮಧ್ಯಾಹ್ನ ನಮ್ಮ ಮಗಳನ್ನು ಜಮೀನಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ.ಬಳಿಕ ಆಕೆ ಅಳುತ್ತಿದ್ದಾಳೆ ಎಂದು ಆತನೇ ಕರೆದುಕೊಂಡು ಬಂದು ಮನೆಯ ಮುಂದೆ ಬಿಟ್ಟು ಹೋಗಿದ್ದಾನೆ’ ಎಂದು ಬಾಲಕಿಯ ಪೋಷಕರು ಗಾಣಗಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

