Breaking News

ಬೈಕಂಪಾಡಿ: ಸುಗಂಧ ದ್ರವ್ಯ ಕಾರ್ಖಾನೆ ಬೆಂಕಿಗಾಹುತಿ.

ನಗರದ ಹೊರವಲಯದ ಬೈಕಂಪಾಡಿಯಲ್ಲಿರುವ ಅರೋಮೇಜನ್‌ ಸುಗಂಧ ದ್ರವ್ಯ ಕಾರ್ಖಾನೆಗೆ ಬುಧವಾರ ನಸುಕಿನಲ್ಲಿ ಬೆಂಕಿ ತಗುಲಿದ್ದು, ಅದರಲ್ಲಿ ದಾಸ್ತಾನು ಮಾಡಿದ್ದ ಸುಗಂಧದ್ರವ್ಯ ಹಾಗೂ ಅದನ್ನು ತಯಾರಿಸುವ ಸಾಮಗ್ರಿಗಳು ಸಂಪೂರ್ಣ ನಾಶವಾಗಿವೆ.ಕಾರ್ಖಾನೆಗೆ ಬೆಂಕಿ ತಗುಲಿದ್ದನ್ನು ಗಮನಿಸಿದ ಎಂಸಿಎಫ್‌ ಸಿಬ್ಬಂದಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ತಗುಲಿರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ದಳದ ಮೂಲಗಳು ತಿಳಿಸಿವೆ. ಈ ಬೆಂಕಿ ಅವಘಡದಿಂದ ಸುಮಾರು₹ 4 ಕೋಟಿ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.

Share News

About BigTv News

Check Also

2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ RFO ಲೋಕಾಯುಕ್ತ ಬಲೆಗೆ

ತುಮಕೂರು: ಗುಬ್ಬಿ ವಲಯ ಅರಣ್ಯಾಧಿಕಾರಿ (RFO) ಕೆ.ಎಸ್. ಸತೀಶ್ ಚಂದ್ರ ಅವರು ₹2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ …

Leave a Reply

Your email address will not be published. Required fields are marked *