ಪಾಕಿಸ್ತಾನಕ್ಕೆ ಜೀವಂತವಾಗಿ ಸೆರೆಸಿಕ್ಕಿದ್ದ ಬಿಎಸ್‌ಎಫ್ ಯೋಧ ಪೂರ್ಣಂ ಕುಮಾರ್ ಶಾ ಬಿಡುಗಡೆಯಾಗಿದ್ದಾರೆ. ಪಹಲ್ಗಾಮ್ ದಾಳಿಯ ನಂತರ ಭಾರತ ನಡೆಸುತ್ತಿದ್ದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಪೂರ್ಣಂ ಸಾಹು ಗಡಿ ದಾಟಿ ಹೋಗಿ ಪಾಕ್ ಯೋಧರ ಕೈಗೆ ಸೆರೆಸಿಕ್ಕಿದ್ದರು.ಪೂರ್ಣಂ ಬಂಧನದ ಬೆನ್ನಲ್ಲೇ ಭಾರತವೂ ಸಹ ಪಾಕಿಸ್ತಾನದ ಯೋಧನೊಬ್ಬನನ್ನು ಜೀವಂತವಾಗಿ ಸೆರೆಹಿಡಿದಿತ್ತು. ಕೂಡಲೇ ಎಚ್ಚೆತ್ತುಕೊಂಡ ಪಾಕಿಸ್ತಾನವು ಈಗ ತನ್ನ ಯೋಧನ ಬಿಡುಗಡೆಗಾಗಿ ಭಾರತದ ಯೋಧನನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ.ಗಡಿ ರಕ್ಷಣಾ ಪಡೆ (BSF) ಈ ಕುರಿತು ಪತ್ರಿಕಾಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇಂದು ಕ್ಕೆ ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆಯ ಯೋಧ ಪೂರ್ಣಂ ಕುಮಾರ್ ಶಾ ಅವರನ್ನು ಮರಳಿ ಪಡೆಯಲಾಗಿದೆ. ವಾಘಾ ಪರ್ಡರ್ ನಲ್ಲಿ ಏ.23 ರಂದು ಅವರು ಗಡಿ ದಾಟಿ ಹೋಗಿದ್ದರು. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಅವರನ್ನು ಪಾಕಿಸ್ತಾನದ ನೆಲೆಯಲ್ಲಿ ಬಂಧಿಸಲಾಗಿತ್ತು
bigtvnews | Hubli Dharwad News | Kannada News | Karnataka News Hubli News | News In Hubli | Local news

