Breaking News

ನೇಪಾಳ: ಹಿಂಸಾತ್ಮಕ ಪ್ರತಿಭಟನಾಕಾರರಿಂದ ಅಧಿಕಾರ ಬದಲಾವಣೆ!

ನೇಪಾಳದಲ್ಲಿ ಅವ್ಯವಸ್ಥೆ ಹೆಚ್ಚಾಗಿದೆ. ಲಕ್ಷಾಂತರ ಯುವಕರು ಕಾಠ್ಮಂಡುವಿನಲ್ಲಿ ಹಿಂಸಾಚಾರ ನಡೆಸಿ ಸಂಸತ್ತು, ಸರ್ವೋಚ್ಚ ನ್ಯಾಯಾಲಯ , ಪ್ರಧಾನಮಂತ್ರಿ ಮತ್ತು ಅನೇಕ ಮಂತ್ರಿಗಳ ಮನೆಗಳಿಗೆ ಬೆಂಕಿ ಹಚ್ಚಿದರು. ಇದರೊಂದಿಗೆ, ಮಾಜಿ ಪ್ರಧಾನಮಂತ್ರಿ ಶೇರ್ ಬಹದ್ದೂರ್ ದೇವುಬಾ, ಮಾಜಿ ವಿದೇಶಾಂಗ ಸಚಿವರಾಗಿದ್ದ ಅವರ ಪತ್ನಿ ಮತ್ತು ದೇಶದ ಹಣಕಾಸು ಮಂತ್ರಿಗಳಿಗೂ ಜನಸಮೂಹದಿಂದ ಅಮಾನುಷ ಹಲ್ಲೆ ನಡೆಸಿದ ವಿಡಿಯೋಗಳು ಹೊರಬಿದ್ದಿವೆ. ಅಲ್ಲಿನ ಎಲ್ಲಾ 42 ಸಂಸದರು ತಮ್ಮ ರಾಜೀನಾಮೆಗಳನ್ನು ನೀಡಿದ್ದಾರೆ. ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿ ಅಧಿಕಾರದಿಂದ ಕೆಳಗಿಳಿದ ತಕ್ಷಣ ಅವರು ನೇಪಾಳವನ್ನು ತೊರೆದಿದ್ದಾರೆ. ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧದಿಂದಾಗಿ ‘ಜೆನ್ ಝೀ’ (1996 ರಿಂದ 2010 ರ ನಡುವೆ ಜನಿಸಿದವರು) ಎನ್ನಲಾಗುವ ಸಮುದಾಯವು ಹಿಂಸಾಚಾರ ನಡೆಸಿ ಇಡೀ ದೇಶದ ಅಧಿಕಾರವನ್ನೇ ಪಲ್ಲಟಗೊಳಿಸಿತು. ಸೆಪ್ಟೆಂಬರ್ 9ರ ಬೆಳಿಗ್ಗೆಯಿಂದ ಹಿಂಸಾಚಾರ ಪ್ರಾರಂಭವಾಯಿತು. ಲಕ್ಷಾಂತರ ಯುವಕರು ರಾಜಧಾನಿ ಕಾಠ್ಮಂಡುವಿನ ರಸ್ತೆಗಳಲ್ಲಿ ಹಿಂಸಾಚಾರ ಮಾಡತೊಡಗಿದರು.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *