Breaking News

ಕೆಪಿಎಲ್ -7ಗೀಗ ‘ತುಪ್ಪ’ವೇ ಆಕರ್ಷಣೆ..

ಕೆಪಿಎಲ್ ಈಗ ಮತ್ತೆ ಬಂದಿದೆ. ಆರು ಆವೃತ್ತಿ ಯಶಸ್ವಿಯಾಗಿದ್ದು, ಸೀಸನ್ 7 ಸಾಕಷ್ಟು ಎಕ್ಸೈಟ್ ಮೆಂಟಾಗಿರಲಿದೆ. ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾಂಗಣ ಕೂಡ ಹುಬ್ಬಳ್ಳಿಯಲ್ಲಿ ತಯಾರಿಗಿರೋದ್ರಿಂದ ವಾಣಿಜ್ಯನಗರ ಜನ ಕೂಡ ಕ್ರಿಕೆಟ್ ಎಂಜಾಯ್ ಮಾಡೋಕೆ ಕಾತರವಾಗಿದಾರೆ. ಆದ್ರೇ, ಈವರೆಗೂ ಹುಬ್ಬಳ್ಳಿ ಟೈಗರ್ಸ್ ಒಂದ್ಸಾರಿಯೂ ಕೆಪಿಎಲ್ ಕಪ್ ಗೆದ್ದಿಲ್ಲ. ಆದ್ರೇ, ಈ ಸಾರಿ ಕ್ಯಾಪ್ಟನ್ ವಿನಯಕುಮಾರ್ ಗೇಮ್ ಪ್ಲಾನ್ ಚೇಂಜ್ ಮಾಡಿದಾರೆ.
ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಯಂಗಸ್ಟರ್ಸ್ ಒಳ್ಳೇ ಪ್ಲ್ಯಾಟ್ ಫಾರ್ಮಸ್ ಕೆಪಿಎಲ್. ಕೆಎಸ್ ಸಿಎ ಆಡಿಸ್ತಿರೋ ಕೆಪಿಎಲ್ ಈವರೆಗಿನ ಆರೂ ಸೀಸನ್ ಗಳು ಯಶಸ್ವಿಯಾಗಿವೆ. ಕೆಪಿಎಲ್ ಸೀಸನ್ -7 ದಿನಗಣನೆ ಆರಂಭವಾಗಿದೆ. ಆಗಸ್ಟ್ 15ರಂದು ಬೆಂಗಳೂರಿನಲ್ಲಿ ಕೆಪಿಎಲ್ ಗೆ ಚಾಲನೆ ಸಿಗಲಿದೆ. ಇದಾದ್ಮೇಲೆ ಆಗಸ್ಟ್ 19ರಿಂದ 26ರವರೆಗೂ ಹುಬ್ಬಳ್ಳಿಯಲ್ಲಿ ಕೆಪಿಎಲ್ ಲೀಗ್ ಮ್ಯಾಚ್ ಗಳು ನಡೆಯಲಿವೆ.  ಅಲ್ಲಿಂದ 29ಕ್ಕೆ ಮೈಸೂರಿಗೆ ಪಂದ್ಯಗಳು ಶಿಫ್ಟಾಗಲಿವೆ. ವಿಶೇಷ ಅಂದ್ರೇ ಕೆಪಿಎಲ್ -7 ರಾಯಬಾರಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ.  ಹುಬ್ಬಳ್ಳಿಯಲ್ಲಿರೋ ನಡೆಯ ಪಂದ್ಯಗಳ ಪ್ರೋತ್ಸಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ರಾಗಿಣಿ ಕೆಪಿಎಲ್ ಜತೆಗಿನ ತಮ್ಮ ಒಡನಾಟವನ್ನ ಹೇಳ್ಕೊಂಡ್ರು. ಅದರಲ್ಲೂ ಹುಬ್ಬಳ್ಳಿ ಜನರ ಅಭಿಮಾನವನ್ನಂತೂ ಮುಕ್ತವಾಗಿ ಶ್ಲಾಘಿಸಿದ್ರು. ಸಿನಿ ಕೆರಿಯರ್ ನ 2ನೇ ಇನ್ನಿಂಗ್ಸ್ ‘ರಾಗಣಿ ಐಪಿಎಸ್’ ಅನ್ನೋ ಸಿನಿಮಾ ವಾಣಿಜ್ಯನಗರಿಯಲ್ಲೇ ಶೂಟ್ ಮಾಡಿದ್ದನ್ನ ಹೇಳ್ಕೊಂಡ್ರು. ಕ್ರಿಕೆಟ್ ಅಂದ್ರೇ ಚಿಕ್ಕಂದಿನಿಂದಲೂ ಇಷ್ಟ. ಆದ್ರೇ, ಆಡೋಕೆ ಆಗಲೇ ಇಲ್ಲ. ಕ್ರಿಕೆಟ್ ಮಾತ್ರ ಇಷ್ಟಪಡ್ತೀನಿ.  ಐಪಿಎಲ್, ಕೆಪಿಎಲ್, ಸಿಸಿಎಲ್ ನಲ್ಲಿ ತೊಡಗಿಸ್ಕೊಂಡ್ಮೇಲೆ ಕ್ರಿಕೆಟ್ ಬಗೆಗಿನ ಒಲವು ಮತ್ತಷ್ಟು ಹೆಚ್ಚಿತಂತೆ. ಬಳ್ಳಾರಿ  ಟಸ್ಕರ್ಸ್ ಗೆ ಕೋ-ಒನರಾಗಿದ್ಮೇಲಂತೂ ಕೆಪಿಎಸ್ ಅಷ್ಟೇ ಅಲ್ಲ, 
ಪ್ಲೇಯರ್ಸ್ ಪ್ರಶ್ಯರ್, ಗ್ರೀನ್  ರೂಮ್ ನಲ್ಲಿ ಪ್ಲೇಯರ್ಸ್ ಜತೆಗೆ ಬೆರೆತ ಮೇಲಂತೂ ಗೇಮ್ ಪ್ರತಿ ಎಲಿಮೆಂಟ್ ಗೊತ್ತಾದವು ಅಂತಾರೆ ರಾಗಿಣಿ. ಕೆಪಿಎಲ್ ಪ್ಲೇಯರ್ಸ್ ಜತೆಗಿನ ಅಟ್ಯಾಟ್ಮೆಂಟ್ ಜತೆಗೆ ಕೆಪಿಎಲ್ ಹೇಗೆ ತನಗೆ ಸ್ಪೆಷಲ್ ಅಂತ ರಾಗಿಣಿ ಹೇಳುವಾಗ ಖುಷಿ ಕಾಣಿಸ್ತಾಯಿತ್ತು. ಆದ್ರೀಗ ಸೀಸನ್-7ಗೆ ಬ್ರ್ಯಾಂಡ್ ಅಂಬಾಸಿಡರಾಗಿದ್ರಿಂದ ಮತ್ತಷ್ಟು ಖುಷಿಯಾಗಿದೆಯಂತೆ. ಅಂದ್ಕೊಂಡಿದ್ದ ಸಾಧಿಸ್ಬೇಕು ಅನ್ನೋರಿಗೆ ಕೆಪಿಎಲ್ ಒಳ್ಳೇ ಅವಕಾಶ ಅಂದ್ರು ರಾಗಿಣಿ.
ರಾಗಿಣಿ ದ್ವಿವೇದಿ, ಕೆಪಿಎಲ್-7 ಬ್ರ್ಯಾಂಡ್ ಅಂಬಾಸಿಡರ್
ಈ ಸಾರಿಯೂ ದಾವಣಗೆರೆ ಎಕ್ಸ್ ಪ್ರೆಸ್ ವಿನಯಕುಮಾರ್ ಕೆಪಿಎಲ್ ನ ಸ್ಟಾರ್ ಆಟಗಾರ. ಜತೆಗೆ ಹುಬ್ಬಳ್ಳಿ ಟೈಗರ್ಸ್ ಕ್ಯಾಪ್ಟನ್ ಕೂಡ. ಯಂಗ್ ಸ್ಟಾರ್ಸ್ ಗೆ ಕೆಪಿಎಲ್ ಗ್ರೇಟ್ ಪ್ಲ್ಯಾಟ್ ಫಾರ್ಮ್. ಮೊದಲ ಆವೃತ್ತಿಯಿಂದಲೂ ಪ್ಲೇಯರಾಗಿ, ಕ್ಯಾಪ್ಟನಾಗಿ ವಿನಯ ಒಳ್ಳೇ ಫಾರ್ಮ್ ಕಾಯ್ದುಕೊಂಡಿದಾರೆ.  ಕೆಪಿಎಲ್ ಬಳಿಕ ಐಪಿಎಲ್ ಆಡಿದ್ರಿಂದ ಇಂಡಿಯನ್ ಟೀಂಗೆ ಚಾನ್ಸ್ ಸಿಕ್ಕಿದೆ. ಕೆಪಿಎಲ್ ವಿನಯ್ ಕೆರಿಯರ್ ಗೆ ಒಂದ್ ದಾರಿ ತೋರಿದೆ. ವರ್ಷದಿಂದ ವರ್ಷಕ್ಕೆ ಕೆಪಿಎಲ್ ಸಕ್ಸಸಾಗಿರೋದರ ಹಿಂದೆ ಕೆಎಸ್ ಸಿಎ ಕೂಡ ಕಾರಣ. ಆದ್ರೇ, ಹುಬ್ಬಳ್ಳಿ ಟೈಗರ್ಸ್ ಟೀಂ ಒಳ್ಳೇ ಟ್ಯಾಲೆಂಟ್ ಗಳನ್ನ ಹೊಂದಿದೆ. 2 ವರ್ಷ ರನ್ನರಪ್ ಆಗಿ, ಬಹುತೇಕ ಸೀಸನ್ ಗಳಲ್ಲಿ ಟಾಪ್ 4ರಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವಿದೆ. ಆದ್ರೇ, ಹುಬ್ಬಳ್ಳಿ ಟೈಗರ್ಸ್ ಟ್ರೋಫಿ ಗೆದ್ದಿಲ್ಲ. ಈ ಸಾರಿ ಟ್ರೋಫಿ ಗೆಲ್ಲೋ ವಿಶ್ವಾಸದಲ್ಲಿ ವಿನಯ ನೇತೃತ್ವದ ಟೀಂ ಇದೆ. ಈ ಸಾರಿ ಸ್ಥಳೀಯರ ಸಪೋರ್ಟ್ ಇನ್ನಷ್ಟು ಸಿಕ್ರೇ ಕಪ್ ನಮ್ದೆ ಅಂತಿದಾರೆ ವಿನಯಕುಮಾರ್. ವಿನಯಕುಮಾರ್, ಕ್ಯಾಪ್ಟನ್, ಹುಬ್ಬಳ್ಳಿ ಟೈಗರ್ಸ್ ಟೀಂ ಕೆಪಿಎಲ್ ಉತ್ತರಕರ್ನಾಟಕದಲ್ಲಿ ಎಷ್ಟರಮಟ್ಟಿಗೆ ಕ್ರೇಜ್ ಹುಟ್ಟಿಸಿದೆ ಅಂದ್ರೇ ವಿಜಯಾನಂದ ಕಾಶಪ್ಪನವರ ಓನರಾಗಿರೋ ಬಿಜಾಪುರ ಬುಲ್ಸ್ ಆಡೋ ಮ್ಯಾಚ್ ಗಳನ್ನ ನೋಡೋಕೆ ನೂರಾರು ಬಸ್ ಗಳಲ್ಲಿ ಬಾಗಲಕೋಟ, ವಿಜಯಪುರದಿಂದ ಜನ ಬಂದಿದ್ರು. ಈ ಸಾರಿಯೂ ಅದೇ ರೀತಿಯಲ್ಲೇ ಕೆಪಿಎಲ್ ಉತ್ತರಕರ್ನಾಟಕದಲ್ಲಂತೂ ಫೀವರ್ ಹೆಚ್ಚಸಲಿದೆ.
Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *