Breaking News

ಬಾಗಲಕೋಟೆಯ ಆಂಜನೇಯ ದೇವಸ್ಥಾನ ಸುತ್ತಲೂ ಭಂಡಾರದ ಮಳೆ; ಗ್ರಾಮಸ್ಥರಲ್ಲಿ ಅಚ್ಚರಿ.

ಆಂಜನೇಯ ದೇವಸ್ಥಾನದ ಪರಿಸರದಲ್ಲಿ ಭಂಡಾರದ ಮಳೆಯಾಗಿದೆ ಎಂದು ಹೆಗ್ಗರೂ ಗ್ರಾಮದ ಗ್ರಾಮಸ್ಥರು ಹೇಳುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೆಗ್ಗೂರು ಗ್ರಾಮದಲ್ಲಿ ಅಚ್ಚರಿ ವಿದ್ಯಮಾನಕ್ಕೆ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ. ಮಳೆಹನಿಗಳ ರೂಪದಲ್ಲಿ ದೇವಸ್ಥಾನದ ಆವರಣ ಸುತ್ತಲೂ ಭಂಡಾರ ಬಿದ್ದಿದೆ.ಮಳೆ‌ ಹನಿಯ ಹಳದಿ ಕಲೆಗಳ ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.ಈ ಕುರಿತು ಮಾತನಾಡಿರುವ ದೇವಸ್ಥಾನದ ಅರ್ಚಕ, ಶುಕ್ರವಾರ ಸಂಜೆ 5ರ ವೇಳೆ ಗ್ರಾಮದಲ್ಲಿ ಮಳೆಯಾಗಿತ್ತು. ಇಂದು ಬೆಳಗ್ಗೆ ದೇವಸ್ಥಾನಕ್ಕೆ ಬಂದ ಯುವಕ, ಹನಿಗಳ ರೂಪದಲ್ಲಿ ಭಂಡಾರ ಬಿದ್ದಿರೋದನ್ನು ಗಮನಿಸಿದ್ದಾರೆ. ಕೂಡಲೇ ನನಗೆ ಮಾಹಿತಿ ನೀಡಿದರು.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *