ಭಾರತೀಯ ವಾಯುಸೇನೆಯಲ್ಲಿ ಇಂಜಿನೀಯರ್ ಆಗಿದ್ದ 25 ವರ್ಷದ ಲೋಕೇಶ್ ಪವನ್ ಕೃಷ್ಣ ಆತ್ಮಹತ್ಯೆ ಮಾಡಿಕೊಂಡ ಯುವಕ. ಬೆಂಗಳೂರಿನ ಚಿಕ್ಕಬಿದರಕಲ್ಲು ಪ್ರೆಸ್ಟೇಜ್ ಜಿಂದಾಲ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಈ ಪ್ರಕರಣ ನಡೆದಿದೆ. ಮೂಲತಃ ಆಂದ್ರದ ಕಡಪ ಜಿಲ್ಲೆಯ ನಿವಾಸಿ ಮೃತ ಲೋಕೇಶ್ ಪವನ್ ಕೃಷ್ಣ, ಹಲಸೂರಿನ ಮಿಲಿಟರಿ ಕ್ವಾಟರ್ಸ್ ನಲ್ಲಿ ವಾಸವಾಗಿದ್ದರು. 24ನೆ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ತನಿಖೆ ವೇಳೆ ಮೃತ ಲೋಕೇಶ್, ಹಲವು ದಿನಗಳಿಂದ ಊಟ ಸೇರುತ್ತಿರಲಿಲ್ಲ, ಹಾಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ..
bigtvnews | Hubli Dharwad News | Kannada News | Karnataka News Hubli News | News In Hubli | Local news

