ಹುಬ್ಬಳ್ಳಿ: ಕಲಘಟಗಿಯ ಹರ್ಷಾ ಎಂಟರಟೇನಮೇಂಟ್ ವಂಚನೆ ಪ್ರಕರಣ ಹಿನ್ನೆಲೆ ಅಧಿಕಾರಿಗಳು ಹುಬ್ಬಳ್ಳಿಯ ಬೈರಿದೇವರಕೊಪ್ಪ ಬಳಿಯ 1 ಗುಂಟೆ 08 ಅಣೇ ಪ್ಲಾಟ್ ಜಪ್ತಿ ಮಾಡಿದ್ದಾರೆ.ಧಾರವಾಡ ಉಪ ವಿಭಾಗ ಅಧಿಕಾರಿ ಮಹ್ಮದ್ ಜುಬೇರ್ ಹಾಗೂ ತಹಶಿಲ್ದಾರರ ಶಶೀಧರ ಮಾಡ್ಯಾಳ ನೇತೃತ್ವದಲ್ಲಿ ಜಪ್ತಿ ಮಾಡಿದ್ದಾರೆ.ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಖಾಸನೀಸ್ ಸಹೋದರರಾದ ಸತ್ಯಭೋದ ಖಾಸ್ ನೀಸ್, ಸಂಜೀವ ಖಾಸನೀಸ್ ಹಾಗೂ ಶ್ರೀಕಾಂತ್ ಖಾಸ್ ನೀಸ್ ಸಹೋದರರು ವಂಚನೆ ಮಾಡಿದ್ದು, 2017 ರಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಸಿಐಡಿ ಸಂಸ್ಥೆಯಿಂದ ಕೂಡ ತನಿಖೆ ಕೈಗೊಳ್ಳಲಾಗಿತ್ತು.ಈ ಹಿನ್ನೆಲೆಯಲ್ಲಿ ಸಿಐಡಿ ವರದಿಯಲ್ಲಿ ಉಲ್ಲೇಖಿತ ಆಸ್ತಿಗಳನ್ನು ಜಪ್ತಿ ಮಾಡಲಾಗುತ್ತಿದ್ದು, ಹುಬ್ಬಳ್ಳಿ, ಕಲಘಟಗಿ, ಹಾಗೂ ಬಳ್ಳಾರಿಯಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಜಪ್ತಿ ಮಾಡಿಕೊಳ್ಳಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





