ತಾಲ್ಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಕಳಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸುವಾಗ ರೈತನ ಮೇಲೆ ಕರಡಿ ದಾಳಿ ನಡೆಸಿ, ಗಾಯಗೊಳಿಸಿದೆ.ತಕ್ಷಣ ಎಚ್ಚೆತ್ತ ರೈತ ರಮೇಶ್ ಸಮೀಪದಲ್ಲೇ ಇದ್ದ ಮರವನ್ನು ಏರಿ ಕುಳಿತಿದ್ದಾರೆ. ಕರಡಿಯು ಸಹ ಮರ ಹತ್ತಿ ರಮೇಶ್ ಅವರ ತೊಡೆಯನ್ನು ಗಾಯಗೊಳಿಸಿದೆ.
ರಮೇಶ್ ಅವರ ಕೂಗಾಟ ಕೇಳಿಸಿಕೊಂಡ ಅಕ್ಕಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ಸ್ಥಳಕ್ಕೆ ದೌಡಾಯಿಸಿ ಬಂದು ಕರಡಿ ದಾಳಿಯಿಂದ ರಮೇಶ್ ಅವರನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಕೊಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

