Breaking News

ಬಸವಾಪಟ್ಟಣ: ಹಸುವಿನ ಕಣ್ಣು ತೆಗೆದು ಪ್ರಾಣ ಉಳಿಸಿದ ಪಶುವೈದ್ಯ.

ಕ್ಯಾನ್ಸರ್‌ ಪೀಡಿತ ಕಣ್ಣಿನಿಂದ ತೀವ್ರ ಬಾಧೆಗೊಳಗಾಗಿದ್ದ ಹಸುವಿನ ಕಣ್ಣನ್ನು ಸಮೀಪದ ದಾಗಿನಕಟ್ಟೆಯ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಮೊಹ್ಮದ್‌ ಉಮರ್‌ ಫಾರೂಕ್‌ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ತೆಗೆದು ಹಾಕಿ ಹಸುವಿನ ಪ್ರಾಣ ಉಳಿಸಿದ್ದಾರೆ.ಹಸುವಿನ ಮಾಲೀಕ ದ್ಯಾಮಣ್ಣ, ‘ಇದು ಏಳು ವರ್ಷದ ಹಸುವಾಗಿದ್ದು, ಈಗ ಮೂರನೇ ಸೂಲಿನ ಗರ್ಭ ಧರಿಸಿದೆ. ಈಗಲೂ ಪ್ರತಿದಿನ 15 ಲೀಟರ್‌ ಹಾಲು ಕೊಡುತ್ತಿದೆ. ಡಾ.ಫಾರೂಕ್‌ ಅವರು ಇಂತಹ ಕ್ಯಾನ್ಸರ್‌ ಪೀಡಿತ ಹಸುವನ್ನು ಉಳಿಸಿ ಉಪಕರಿಸಿದ್ದಾರೆ. ಅವರಿಗೆ ಆಭಾರಿಯಾಗಿದ್ದೇನೆ’ ಎಂದರು.

Share News

About BigTv News

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *