Breaking News

3ನೇ ಮಹಡಿಯಿಂದ ತಳ್ಳಿದ ಮಲತಾಯಿ! ಸಾವಿನ ಸತ್ಯ ಬಿಚ್ಚಿಟ್ಟ ಸಿಸಿಟಿವಿ!

ತಾಯಿಯ ಪ್ರೀತಿಯಿಂದ ವಂಚಿತಳಾದ ಪುಟ್ಟ ಬಾಲಕಿ, ತನ್ನ ಮಲತಾಯಿಯ ಕ್ರೂರ ಕೃತ್ಯಕ್ಕೆ ಬಲಿಯಾದ ದುರಂತ ಘಟನೆಯೊಂದು ಬೆಳಕಿಗೆ ಬಂದಿದೆ. ಕೇವಲ ಒಂದು ವಾರದಲ್ಲಿ ಸಿಸಿಟಿವಿ ದೃಶ್ಯಾವಳಿಯಿಂದ ಈ ಘೋರ ಅಪರಾಧದ ಸತ್ಯ ಬಯಲಾಗಿದೆ.ಮೃತ ಬಾಲಕಿ ಶಾನವಿ, ಕೇವಲ ಒಂದು ವರ್ಷದವಳಿದ್ದಾಗ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ಆಕೆಯ ತಂದೆ, ಅಜ್ಜ ಮತ್ತು ಅಜ್ಜಿಯ ಪೋಷಣೆಯಲ್ಲಿ ಬೆಳೆಯುತ್ತಿದ್ದಳು. ಪೊಲೀಸ್ ತನಿಖೆಯ ಸಮಯದಲ್ಲಿ, ರಾಧಾ ಅವರ ಕ್ರೂರತೆಗೆ ಕಾರಣ ಆಸ್ತಿ ಆಸೆ ಎಂಬುದು ತಿಳಿದುಬಂದಿದೆ. ರಾಧಾಳಿಗೆ ತನ್ನ ಅವಳಿ ಮಕ್ಕಳ ಜೊತೆಗೆ, ಶಾನವಿಗೆ ಆಸ್ತಿಯಲ್ಲಿ ಪಾಲು ಸಿಗುವುದನ್ನು ಸಹಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ, ಆಕೆ ಶಾನವಿಯನ್ನು ಕೊಲೆ ಮಾಡಲು ಸಂಚು ರೂಪಿಸಿ, ಕೊನೆಗೆ ಮಹಡಿಯಿಂದ ತಳ್ಳಿ ಹತ್ಯೆ ಮಾಡಿದ್ದಳು. ತಾನು ಮಾಡಿದ ತಪ್ಪನ್ನು ಮರೆಮಾಚಲು ರಾಧಾ ನಾಟಕವಾಡಿದ್ದರೂ, ಸಿಸಿಟಿವಿ ಕ್ಯಾಮರಾ ಆಕೆಯ ಬಂಡವಾಳವನ್ನು ಬಯಲು ಮಾಡಿದೆ.

Share News

About BigTv News

Check Also

ಭಿಕ್ಷುಕಿ ಮಹಿಳೆ ಮೇಲೆ ಕಾಮುಕನ ಕರ್ಮಕಾಂಡ..! ಆಶ್ರಯದ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ಆರೋಪ!

ಅನಾಥಾಶ್ರಮದ ಹೆಸರಿನಲ್ಲಿ ನಂಬಿಸಿ ಅಸಹಾಯಕಳ ಮೇಲೆ ದೌರ್ಜನ್ಯ..! ಮಧ್ಯರಾತ್ರಿ ಕೃತ್ಯ — ಸಾರ್ವಜನಿಕರ ಕೈಗೆ ಸಿಕ್ಕ ಆರೋಪಿ! ಆಶ್ರಯದ ನೆಪದಲ್ಲಿ …

Leave a Reply

Your email address will not be published. Required fields are marked *