Breaking News

ರೈಲ್ವೇ ನೌಕರಿ ಬೇಕು ಅಂದ್ರೆ ಮಂಚಕ್ಕೆ ಬಾ ಎಂದು ಕಾಮುಕ : ಇದೀಗ ಪೋಲಿಸ್ ರ ಬಲೆಯಲ್ಲಿ

ಹುಬ್ಬಳ್ಳಿ: ರೈಲ್ವೇ ನೌಕರಿ ಬೇಕು ಅಂದ್ರೆ ನನ್ನ ಜೊತೆ ಮಂಚವನ್ನು ಹಚ್ಚಿಕೊಳ್ಳಬೇಕು ಎಂದು ಮಹಿಳೆಯೊಬ್ಬರಿಗೆ ಸರ್ಕಾರಿ ನೌಕರಿಯ ಆಮಿಷ ಒಡ್ಡಿ, ಲೈಂಗಿಕವಾಗಿ ಬಳಸಿಕೊಳ್ಳಲು ಮುಂದಾಗಿದ್ದ ರೈಲ್ವೇ ಇಲಾಖೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ನದೀಮ್ ಎಂಬ ಕಾಮುಕನು ಇದೀಗ ಪೋಲಿಸ ಅತಿಥಿಯಾಗಿದ್ದಾರೆ.

ರೈಲ್ವೇ ಇಲಾಖೆಯ GM ಕಚೇರಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ನದೀಮ್ ಎಂಬಾತ ನಕಲಿ ಫೇಸ್ಟುಕ್ ಅಕೌಂಟ್ ಮಾಡಿಕೊಂಡು ಮಹಿಳೆಯೊಬ್ಬರಿಗೆ ಮೆಸೆಂಜ‌ರ್ ಮೂಲಕ ನಾನು ದೆಹಲಿಯಲ್ಲಿರುವ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿ ನಾನು ಹುಬ್ಬಳ್ಳಿಗೆ ಬಂದಿದ್ದೇನೆ. ನಾನು ರೈಲ್ವೇ ಇಲಾಖೆಯ ಆಫೀಸರ್ ರೆಸ್ಟ್ ಹೌಸ್‌ನ ರೂಮ್ ನಂಬರ್ 201ರಲ್ಲಿ ಇದ್ದೇನೆ ಬಾ ಅಂತಾ ಕರೆಯಿಸಿ ತನ್ನ ಕಾಮ ತೃಷೆ ತೀರಿಸಿಕೊಳ್ಳಲು ಮುಂದಾಗಿದ್ದ.

ಮಹಿಳೆ ಈತನಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಳು. ಮಾಹಿತಿಯನ್ನು ಡಿಸಿಪಿ ರವೀಶ್‌ ಅವರ ಗಮನಕ್ಕೆ ತರಲಾಗಿತ್ತು. ಕೂಡಲೇ ಎಸಿಪಿ ಶಿವಪ್ರಕಾಶ ಮಾರ್ಗದರ್ಶನದಲ್ಲಿ PSI ಶರಣ್ ದೇಸಾಯಿ ಟೀಮ್ ದಾಳಿಯನ್ನು ಮಾಡಿ ರೂಮ್ ನಂ 201ರಲ್ಲಿ ಬನಿಯನ್ ಹಾಗೂ ಚಡ್ಡಿಯಲ್ಲಿದ್ದ ನದೀಮ್‌ನನ್ನು ಎತ್ತಾಕಿಕೊಂಡು ಹೋಗಿ ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಕಮಿಷನ‌ರ್ ಎನ್ ಶಶಿಕುಮಾ‌ರ್ ಹೇಳಿದ್ದಾರೆ.

ಅಷ್ಟೇ ಅಲ್ಲದೆ ಈ ಮಹಿಳೆಯನ್ನು ಹೊರತುಪಡಿಸಿ ಮತ್ಯಾರಾಗಿದ್ದರೂ ಈ ರೀತಿಯ ಲೈಂಗಿಕ ದೌರ್ಜನ್ಯ ಮಾಡಿದ್ದಾನಾ ಈ ನದೀಮ್ ಎಂಬುದರ ಕುರಿತು ಇದೀಗ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

Share News

About Shaikh BigTv

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *