ಪಟ್ಟಣದ ಎಸ್ಡಿವಿಎಸ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 5ನೇ ತರಗತಿ ವಿದ್ಯಾರ್ಥಿ ಗುರು ಪ್ರಸಾದ್ ಎಂಬಾತನ ಮೇಲೆ ಶಿಕ್ಷಕಿ ಭಾನುಮತಿ ಹಲ್ಲೆ ಮಾಡಿದ್ದು, ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಶಿಕ್ಷಕಿ ಈತನಿಗೆ ಅನುಮತಿ ಕೊಟ್ಟಿಲ್ಲ. ಆದರೂ, ಈತ ಶೌಚಾಲಯಕ್ಕೆ ತೆರಳಿದ್ದರಿಂದ ಕುಪಿತಗೊಂಡ ಶಿಕ್ಷಕಿ ಜಾಮಿಟ್ರಿ ಬಾಕ್ಸ್, ಕಡ್ಡಿ ಹಾಗೂ ಕೈಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ವಿದ್ಯಾರ್ಥಿ ತೀವ್ರ ಗಾಯಗೊಂಡು, ಕುಸಿದು ಬಿದ್ದಿದ್ದಾನೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

