ಬೆಂಗಳೂರಲ್ಲಿ ಆಟೋ ಚಾಲಕನೋರ್ವ ಬ್ಯಾಗ್ ಇಡುವ ನೆಪದಲ್ಲಿ ಯುವತಿಯ ಖಾಸಗಿ ಅಂಗಕ್ಕೆ ಕೈ ಹಾಕಿ ವಿಕೃತಿ ಮೆರೆದಿರುವ ಘಟನೆ ಜೆಪಿ ನಗರದ 7ನೇ ಹಂತದಲ್ಲಿ ನಡೆದಿದೆ. ಯುವತಿ ಜೆಪಿ ನಗರದ ಏಳನೇ ಸ್ಟೇಜ್ ನಿಂದ ಆಟೋ ಬುಕ್ ಮಾಡಿದ್ದಾಳೆ. ಸ್ಥಳಕ್ಕೆ ಬಂದ ಆಟೋ ಚಾಲಕ ಬ್ಯಾಗ್ ಇಡುವುದಾಗಿ ಹೇಳಿ, ಯುವತಿ ಬಳಿ ಬಂದು ಮೊದಲಿಗೆ ಮೈ ಮುಟ್ಟಿದ್ದಾನೆ. ಬಳಿಕ ನಿಮಗೆ ಜ್ವರ ಬಂದಿದೆಯೇ ಎನ್ನುತ್ತಾ ಹಣೆ ಮುಟ್ಟುವ ನೆಪದಲ್ಲಿ ಏಕಾಏಕಿ ಯುವತಿಯ ಖಾಸಗಿ ಅಂಕ್ಕೆ ಕೈ ಹಾಕಿದ್ದಾನೆ. ಈ ಸಂಬಂಧ ಯುವತಿ ಆಟೋ ಚಾಲಕ ಹನುಮಂತಪ್ಪ ಹೆಚ್ ತಳವಾರ ವಿರುದ್ಧ ದೂರು ದಾಖಲಿಸಿದ್ದಾಳೆ. ಪೊಲೀಸರು ಸದ್ಯ ಆರೋಪಿ ಹನುಮಂತಪ್ಪ ಹೆಚ್ ತಳವಾರನನ್ನು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

