Breaking News

ಸೇಡಿನ ಕೊಲೆಯೇ! ಸುರತ್ಕಲ್‌ನಲ್ಲಿ ಎರಡು ವರ್ಷ ಹಿಂದೆ ನಡೆದ ಫಾಝಿಲ್‌ ಕೊಲೆಗೆ ಪ್ರತೀಕಾರದ ಹತ್ಯೆ!!

ತಮ್ಮನ ಮಗಳ ಮದುವೆಯ ಬಳಿಕದ ಕಾರ್ಯಕ್ರಮದಲ್ಲಿ ನಾವು ಗುರುವಾರ ರಾತ್ರಿ ಊಟ ಬಡಿಸುತ್ತಿದ್ದೆವು. ಆತನ ಮಗನ ಸ್ನೇಹಿತರಿಗೆ ಫೋನ್ ಕರೆ ಬಂತು. ಹಲ್ಲೆಯಿಂದ ಗಾಯಗೊಂಡ ಮಗನನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಆತ ಹುಷಾರಾಗಿದ್ದಾನೆ ಎಂದರು. ಆದರೆ ರಾತ್ರಿ 11 ಗಂಟೆಗೆ ಸುಮಾರಿಗೆ ಆತ ಮೃತಪಟ್ಟಿದ್ದು ಗೊತ್ತಾಯಿತು’ ಎಂದು ಅವರು ತಿಳಿಸಿದರು. ಮಗನದ್ದೂ ಸೇಡಿನ ಕೊಲೆಯೇ. ಸುರತ್ಕಲ್‌ನಲ್ಲಿ ಎರಡು ವರ್ಷ ಹಿಂದೆ ನಡೆದ ಫಾಝಿಲ್‌ ಕೊಲೆಗೆ ಪ್ರತೀಕಾರವಾಗಿ ಈ ಹತ್ಯೆ ನಡೆದಿರಬಹುದು. ತನ್ನನ್ನು ನಗರದಿಂದ ಯಾರೋ ಹಿಂಬಾಲಿಸಿಕೊಂಡು ಬಂದಿದ್ದರು ಎಂದು ಆರು ತಿಂಗಳು ಹಿಂದೆ ಹೇಳಿದ್ದ. ಅವನು ಬಜಪೆಯಲ್ಲೇ ಇದ್ದುದು ಹೆಚ್ಚು. ನನ್ನ ಮಗ ಹಿಂದುತ್ವಕ್ಕೆ ಹೋರಾಟ ಮಾಡುತ್ತೇನೆ ಎನ್ನುತ್ತಿದ್ದ. ಅವನ ಉಸಿರನ್ನೇ ನಿಲ್ಲಿಸಿಬಿಟ್ಟರು. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ಯಾರೇ ಆಗಲಿ. ಇನ್ನೊಂದು ಸಲ ಹೀಗೆ ಆಗಬಾರದು’ ಎಂದು ಸುಹಾಸ್ ಶೆಟ್ಟಿ ಅವರ ತಾಯಿ ಸುಲೋಚನಾ ಹೇಳಿದರು.ಕ್ಯಾನ್ಸರ್ ಪೀಡಿತ ತಾಯಿ, ವಯಸ್ಸಾದ ತಂದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಕಣ್ಣೆದುರೇ ಬೆಳೆದ ಮಗನ ಪಾರ್ಥಿವ ಶರೀರವು ಮೈಮೇಲೆ ಗಂಧದ ಮಾಲೆಗಳನ್ನು ಹೊದ್ದುಕೊಂಡು ಮನೆಯಂಗಳಕ್ಕೆ ಬಂದಾಗ ಈ ಹಿರಿಯ ಜೀವಗಳಿಗೆ ಹಿಡಿದಿಟ್ಟುಕೊಂಡ ನೋವನ್ನು ತಡೆಯಲಾಗಲಿಲ್ಲ.

Share News

About BigTv News

Check Also

ರಾಜಕೀಯ ಮರೆತು ಮಾನವೀಯತೆ ಮೆರೆದ ಕ್ಷಣ: ಚೆನ್ನಮ್ಮ ಅಂತಿಮ ದರ್ಶನದ ವೇಳೆ ದೇವೇಗೌಡರ ಕೈಹಿಡಿದು ಸಿದ್ದರಾಮಯ್ಯ ಸಾಂತ್ವನ

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಘಟನೆ ಸಾಕ್ಷಿಯಾಯಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ …

Leave a Reply

Your email address will not be published. Required fields are marked *