Breaking News

ಬೈಕ್ ಹತ್ತದಿದ್ದಕ್ಕೆ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ ಪತಿ!

ಮೈಸೂರು ತಾಲೂಕಿನ ಜಟ್ಟಿಹುಂಡಿಯಲ್ಲಿ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ ಪತಿ ದೇವರಾಜ್‌ನನ್ನು ಗುರುವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ.ದೇವರಾಜ್‌ಗೆ ಸವಿತಾ ಎರಡನೇ ಪತ್ನಿಯಾಗಿದ್ದು, ಅವರ ಮಗಳಿಗೆ ಆರೋಗ್ಯದ ಸಮಸ್ಯೆಯಿದ್ದ ಕಾರಣ ಜಟ್ಟಿಹುಂಡಿ ಸಂತ ಜೋಸೆಫ್ ವೃದ್ಧಾಶ್ರಮದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಆರು ತಿಂಗಳಿನಿಂದ ಅಲ್ಲೇ ಕೆಲಸ ಮಾಡುತ್ತಿದ್ದರು.ಸವಿತಾ ಅವರು ಪ್ರತಿ ಗುರುವಾರ ಕೆ.ಆರ್. ಆಸ್ಪತ್ರೆಗೆ ಬೆಳಿಗ್ಗೆ ಚಿಕಿತ್ಸೆಗಾಗಿ ತೆರಳುತ್ತಿದ್ದರು. ಗುರುವಾರ 10.30ಕ್ಕೆ ಕೆ.ಆರ್.ಆಸ್ಪತ್ರೆಗೆ ಹೊರಟಿದ್ದರು. ಈ ವೇಳೆ ವೆಂಕಟೇಶ್ ಬೈಕ್‌ನಲ್ಲಿ ಬಂದು ಅಡ್ಡಗಟ್ಟಿ ತನ್ನೊಂದಿಗೆ ಬರುವಂತೆ ಪೀಡಿಸಿದ್ದ. ಒಪ್ಪದಿದ್ದಾಗ ಕೋಪಗೊಂಡ ಆತ ಚಾಕುವಿನಿಂದ ಸವಿತಾ ಅವರ ಹೊಟ್ಟೆಗೆ ಇರಿದು, ಕತ್ತು ಸೀಳಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿತ್ತು.

Share News

About BigTv News

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *