ತಂದೆ ಪಿಂಚಣಿ ಹಣಕ್ಕಾಗಿ ಅಣ್ಣಂದಿರೇ ತಂಗಿಯನ್ನು ಗೃಹಬಂಧನದಲ್ಲಿರಿಸಿದ ಆರೋಪ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಯಲವಗಿ ಗ್ರಾಮದಲ್ಲಿ ಕೇಳಿಬಂದಿದೆ. ಸಹೋದರರ ಕಣ್ಣುತಪ್ಪಿಸಿ ಪೊಲೀಸ್ ಠಾಣೆಗೆ ಬಂದಿರುವ ಬುಜಂಬಿ ಕೆ.ಕೋಟಿ ಎಂಬಾಕೆ ತನ್ನ ಸಹೋದರರಾದ ಸಂಶುದ್ದೀನ್ ಕೋಟಿ, ಮಾಬುಸಾಬ್ ಕಲಂದರ್ ಕೋಟಿ, ಜಮಾಲಸಾಬ್ ಕೋಟಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ.ತನ್ನ ಮೊಬೈಲ್, ಎಟಿಎಂ ಕಾರ್ಡ್, ಚಿನ್ನಾಭರಣ ಕಸಿದುಕೊಂಡಿದ್ದು, 4 ತಿಂಗಳಿಂದ ಗೃಹಬಂಧನದಲ್ಲಿ ಇರಿಸಿದ್ದಾರೆ. ನನ್ನ ಪಾಡಿಗೆ ಬದುಕಲು ಬಿಡಿ ಎಂದು ಗೋಳಾಡಿದ್ದಾರೆ. ಹಾವೇರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಅಲವತ್ತುಕೊಂಡಿರುವ ಬುಜಂಬಿ, ಅಣ್ಣಂದಿರಿಂದ ಆಗುತ್ತಿರುವ ಕಾಟ ತಪ್ಪಿಸುವಂತೆ ಮನವಿ ಮಾಡಿದ್ದಾರೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

