Breaking News

ಲಾರಿ ಪಲ್ಟಿಯಾಗಿ ಸಾವಿರಾರು ಲೀ.‌ ಹಾಲು ಪೋಲು

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಫಲ್ಟಿಯಾದ ಪರಿಣಾಮ ಸಾವಿರಾರು ಲೀಟರ್ ಹಾಲು ಪೋಲಾದ ಘಟನೆ ನಡೆದಿದೆ.ಬೆಳಗಾವಿಯಿಂದ ಮುಂಬೈಗೆ ತೆರಳುತ್ತಿದ್ದ ಹಾಲು ತುಂಬಿದ್ದ ಲಾರಿ ತವದಿ ಘಾಟನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಕ್ಷಾಂತರ ಮೌಲ್ಯದ ಹಾಲು ಪೋಲಾಗಿದೆ.ಲಾರಿಯಲ್ಲಿ ತಾಂತ್ರಿಕ ತೊಂದರೆ ಇಂದಾಗಿ ಚಾಲಕ ಲಾರಿಯ ನಿಯಂತ್ರಣ ತಪ್ಪಿದ್ದಾನೆ ಎನ್ನಲಾಗುತ್ತಿದ್ದು ಪೂನಾ ಬೆಂಗಳೂರು ಹೆದ್ದಾರಿಯಲ್ಲಿ ಹಾಲು ಚೆಲ್ಲಿದ್ದು ಬೇರೆ ವಾಹನ ಸವಾರರು ಕೂಡ ಕೆಲಹೊತ್ತು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.ನಿಪ್ಪಾಣಿ ಶಹರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *