ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 23 ರಂದು ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಗರ್ಭಿಣಿಯೊಬ್ಬರು ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಮೂಲಕ 3.5 ಕೆಜಿ ತೂಕದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ದೇಹದಲ್ಲಿ ಎಲುಬಿನ ರೀತಿಯ ಅಂಶಗಳು ಕಂಡು ಬಂದಿವೆ. ಹೃದಯ ಬಡಿತ, ಪುಪ್ಪಸ, ಮೆದುಳು ರೀತಿಯ ಜೀವಂತ ಅಂಶಗಳು ಕಂಡು ಬಂದಿರುವುದಿಲ್ಲ.ಹೃದಯ ತಜ್ಞರು, ತೆರೆದ ಹೃದಯಶಸ್ತ್ರ ಮತ್ತು ರಕ್ತನಾಳಗಳ ಚಿಕಿತ್ಸಕರ ತಂಡ ರೋಗಿಗೆ ತುರ್ತು ಶಸ್ತ್ರ ಚಿಕಿತ್ಸೆ ಮಾಡಲು ನಿರ್ಧಾರ ಮಾಡಿದರು. ಶಸ್ತ್ರ ಚಿಕಿತ್ಸೆಗೆ ಅವಶ್ಯಕವಿದ್ದ ಫೋಗಾರ್ಟಿ ಕ್ಯಾಥೆಟರ್ ಸಂಸ್ಥೆಯಲ್ಲಿ ಲಭ್ಯವಿರಲಿಲ್ಲ. ನಂತರ ಸ್ಥಳೀಯ ಅನುದಾನದಲ್ಲಿ ಫೋಗಾರ್ಟಿ ಕ್ಯಾಥೆಟರ್ ಖರೀದಿಸಿ, ಅಕ್ಟೋಬರ್ 7 ರಂದು ಡಾ.ಕೋಬಣ್ಣ ಕಟ್ಟಿಮನಿ ಅವರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದರು. ಪ್ರಸ್ತುತ ರೋಗಿಯು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಲು ಸಿದ್ದರಾಗಿದ್ದಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

