ರಾಷ್ಟ್ರಪತಿ ದ್ರೌಪದಿ ಮುರ್ಮು ಅಧಿಕಾರಕ್ಕೆ ಬಂದ ಬಳಿಕ ಈಗ ಹೊಸ ಇತಿಹಾರ ಬರೆಯುವ ಕೆಲಸ ಮಾಡಿದ್ದಾರೆ. ಕೇರಳದ ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದರು.ಇರುಮುಡಿಯಿಂದಿಗೆ ಅವರು ಅಯ್ಯಪ್ಪನ ದರ್ಶನ ಪಡೆದರು. ಹಾಗೆ ಊಟಕ್ಕಾಗಿ ಅಲ್ಲಿನ ಅತಿಥಿ ಗೃಹಕ್ಕೆ ತೆರಳಿದರು. ಹಾಗೆ ಇನ್ನು 4 ದಿನಗಳ ಕಾಲ ಅವರು ಕೇರಳ ಪ್ರವಾಸದಲ್ಲಿ ಕಳೆಯಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

