Breaking News

ಪ್ರಿಯಕರನ್ನು ಟ್ರಂಕ್​​ನಲ್ಲಿ ಬಚ್ಚಿಟ್ಟ ವಿವಾಹಿತ ಮಹಿಳೆ,ಕುಟುಂಬಸ್ಥರ ಕೈಗೆ ಸಿಕ್ಕಿಬಿದ್ದ ಗೆಳೆಯ!

ವಿವಾಹಿತ ಮಹಿಳೆಯನ್ನು ಭೇಟಿಯಾಗಲು ಪ್ರಿಯಕರ ಆಕೆಯ ಮನೆಗೆ ಹೋಗಿದ್ದಾನೆ. ಈ ವೇಳೆಯಲ್ಲಿ ಟ್ರಂಕ್ ನಲ್ಲಿ ಅಡಗಿ ಕುಳಿತಿದ್ದ ಈತನು ಆಕೆಯ ಕುಟುಂಬದವರ ಕೈಗೆ ಸಿಕ್ಕಿ ಬಿದ್ದಿದ್ದು ಕೋಲಿನಿಂದ ಹೊಡೆದಿದ್ದಾರೆ. ಈ ಘಟನೆಯೂ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಕೋಣೆಯಲ್ಲಿ ಯಾರೋ ಮಾತಾಡುವ ಶಬ್ದ ಬರುತ್ತಿದ್ದಂತೆ ಮನೆಯವರಿಗೆ ಅನುಮಾನ ಬಂದಿದೆ. ಕೋಣೆಯಲ್ಲಿ ಯಾರೂ ಕಾಣಿಸದೇ ಇದ್ದರೂ ಟ್ರಂಕ್ ತೆರೆದಾಗ ಮಹಿಳೆಯ ಪ್ರಿಯಕರನು ಅರೆನಗ್ನ ಸ್ಥಿತಿಯಲ್ಲಿ ಅಡಗಿಕೊಂಡಿರುವುದು ಕಂಡುಬಂದಿದೆ. ಕೋಪಗೊಂಡ ಕುಟುಂಬಸ್ಥರು ಆತನಿಗೆ ಮನಬಂದಂತೆ ಕೋಲಿನಿಂದ ಥಳಿಸಿದ್ದು, ಕೊನೆಗೆ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *