Breaking News

ಗುರುವೇ ನಿಜವಾದ ಪರಮದೈವ: ಡಾ. ಹೊಸಮನಿ

ವಿದ್ಯಾರ್ಥಿ ಕಷ್ಟದಲ್ಲಿದ್ದಾಗ, ಆತನಿಗೆ ಹೆಗಲಾಗಿ ನಿಲ್ಲುವವನೇ ನಿಜವಾದ ಗುರು, ಗುರುವು ನಮ್ಮೊಳಗೆ ಜ್ಞಾನವನ್ನು ಹುಟ್ಟಿಸುವ ಬ್ರಹ್ಮನಂತೆ, ನಮ್ಮ ಮನಸ್ಸಿನ ಜ್ಞಾನವನ್ನು ಸರಿಯಾದ ದಾರಿಗೆ ಕೊಂಡೊಯ್ಯುವ ವಿಷ್ಣುವಿನಂತೆ, ನಮ್ಮ ಜ್ಞಾನಕ್ಕೆ ಅಂಟಿಕೊಂಡಿರುವ ತಪ್ಪು ಪರಿಕಲ್ಪನೆಗಳನ್ನು ನಾಶಪಡಿಸುವ ಶಿವನಂತೆ, ಹಾಗಾಗಿ ಗುರುವು ನಮಗೆ ಪರಮದೈವದಂತೆ ಎಂದು ಖ್ಯಾತ ಯೋಗಪಟು ಡಾ. ಶ್ರೀಧರ ಹೊಸಮನಿ ಹೇಳಿದ್ದಾರೆ.

ಪ್ರಕಟಣೆಯಲ್ಲಿ ಅವರು, ನಾವು ನಮ್ಮ ಗುರುವನ್ನು ಪೂಜಿಸಬೇಕು ಮತ್ತು ಅವರಿಗೆ ಗೌರವ ನೀಡಬೇಕು.

ಹಾಗೂ ಯೋಗ ಸಹಸ್ರಾರು ಮಂದಿಯ ಜೀವನವನ್ನು ಬದಲಿಸಿದೆ. ಸೋತು ಕುಗ್ಗಿ ಹೋದವರು ಯೋಗದ ಮೊರೆ ಹೋಗಿ ಬದಲಾದ ಅನೇಕ ನಿದರ್ಶನಗಳಿವೆ. ದೇಹ, ಮನಸ್ಸು, ಉಸಿರು ಎಲ್ಲವನ್ನು ಒಂದೇ ಬಾರಿ ನಮ್ಮ ನಿಯಂತ್ರಣದಲ್ಲಿಡಲು ಸಾಧ್ಯವಾಗಿಸುವುದು ಯೋಗ ಮಾತ್ರ. ಯೋಗ ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯದ ಮೇಲೂ ಸಾಕಷ್ಟು ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದಿದ್ದಾರೆ. ತಾಯಿ-ತಂದೆಯವರಿಗೆ ನಮಸ್ಕಾರ ಮಾಡುವುದೇ

ಅವರಿಗೆ ಸಲ್ಲಿಸುವ ನಿಜವಾದ ಕೃತಜ್ಞತೆ, ಅದೇ ಈ ಗುರು ಪೂರ್ಣಿಮೆ: ನಾವು ನಮ್ಮ ಗೆಳೆಯರನ್ನು ಭೇಟಿ ಆದಾಗ ನಮಸ್ಕಾರ ಮಾಡಬೇಕು; ಕಾರಣ ಪ್ರತಿಯೊಬ್ಬ ವ್ಯಕ್ತಿಯಲ್ಲಿ ದೇವರಿದ್ದಾನೆ ಎಂದು ಡಾ. ಹೊಸಮನಿ ಮಾರ್ಮಿಕವಾಗಿ ಹೇಳಿದ್ದಾರೆ.

Share News

About BigTv News

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕು ನಗರದಲ್ಲಿ ಭೀತಿ! ಕರ್ತವ್ಯದಲ್ಲಿದ್ದ …

Leave a Reply

Your email address will not be published. Required fields are marked *