Breaking News

ನವೆಂಬರ್ ಮಹಾಕ್ರಾಂತಿ ವರ್ಷಾಚರಣೆ….

ಧಾರವಾಡ: ಮಾನವನಿಂದ ಮಾನವನ ಶೋಷಣೆಯನ್ನು ಕೊನೆಗಾಣಿಸಿ, ಪ್ರಪಂಚದಲ್ಲೇ ಮೊದಲ ಬಾರಿಗೆ ಕಾರ್ಮಿಕ ವರ್ಗದ ಅಧಿಕಾರ ಸ್ಥಾಪನೆಗೆ ಕಾರಣವಾದ 1917ರಲ್ಲಿ ರಷ್ಯಾದಲ್ಲಿ ಜರುಗಿದ ನವೆಂಬರ್ ಮಹಾಕ್ರಾಂತಿಯ 106 ನೇ ವರ್ಷಾಚರಣೆ ಕಾರ್ಯಕ್ರಮವನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್ (ಎಸ್.ಯು.ಸಿ.ಐ-ಸಿ) ಪಕ್ಷದ ಧಾರವಾಡ ಜಿಲ್ಲಾ ಸಮಿತಿಯಿಂದ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನವೆಂಬರ್ ಮಹಾಕ್ರಾಂತಿಯ ಶಿಲ್ಪಿಗಳಾದ ಕ ಲೆನಿನ್, ಸ್ಟಾಲಿನ್ ರವರ ಭಾವಚಿತ್ರಕ್ಕೆ ಜಿಲ್ಲಾ ಸಮಿತಿಯ ಹಿರಿಯ ಸದಸ್ಯರಾದ ಗಂಗಾಧರ ಬಡಿಗೇರ್ ಪುಷ್ಪ ನಮನ ಸಲ್ಲಿಸಿದರು. ನವೆಂಬರ್ ಮಹಾಕ್ರಾಂತಿಯ ನೆನಪಿನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿ

ರಷ್ಯಾದ ಮಹಾನ್ ನವೆಂಬರ್ ಸಮಾಜವಾದಿ ಕ್ರಾಂತಿಯಿಂದ ಸ್ಫೂರ್ತಿ ಪಡೆದು ಭಾರತದಲ್ಲಿ ಮರಣಾಸನ್ನ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೊಗೆದು, ದೇಶದ ರೈತರು, ಕೂಲಿ-ಕಾರ್ಮಿಕರು, ದುಡಿಯುವ ವರ್ಗ, ಮದ್ಯಮವರ್ಗ ಎದುರಿಸುತ್ತಿರುವ ಸಮಸ್ಯೆಗಳನ್ನು ಕೊನೆಗಾಣಿಸಲು ಸಮಾಜವಾದಿ ಕ್ರಾಂತಿ ನೆರವೇರಿಸಲು ಪಣತೊಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ದೀಪಾ ಧಾರವಾಡ, ಮಧುಲತಾ ಗೌಡರ್, ಭವಾನಿಶಂಕರ್, ಶರಣು ಗೋನವಾರ, ಸದಸ್ಯರಾದ ದೇವಮ್ಮ ದೇವತಕಲ್, ಗಂಗಾ ಕೋಕರೆ, ಹನುಮೇಶ ಹುಡೇದ್ , ಪ್ರೀತಿ ಸಿಂಗಾಡೆ ಮುಂತಾದವರು ಭಾಗವಹಿಸಿದ್ದರು.

Share News

About BigTv News

Check Also

ಕಾನೂನು ರಕ್ಷಕನೇ ಭಕ್ಷಕ..! ಪೋಕ್ಸೊ ಪ್ರಕರಣದಲ್ಲಿ ಪಿಎಸ್‌ಐ ಬಂಧನ…

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೊ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಬಂಧನ, ಭಟ್ಕಳ: ಸಾರ್ವಜನಿಕರ ರಕ್ಷಣೆ ಮಾಡಬೇಕಿದ್ದ ಪೊಲೀಸ್ ಅಧಿಕಾರಿಯೊಬ್ಬನೇ …

Leave a Reply

Your email address will not be published. Required fields are marked *