ಆಂಧ್ರಪ್ರದೇಶದ ಕರ್ನೂಲಿನಲ್ಲಿ ಘನಘೋರ ಬಸ್ ದುರಂತ ಸಂಭವಿಸಿದೆ. ಚಿನ್ನಟೇಕೂರು ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸ್ಲೀಪರ್ ಬಸ್ ಅಗ್ನಿಗಾಹುತಿಯಾಗಿದೆ . ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣಿಸ್ತಿದ್ದ ಕಾವೇರಿ ಟ್ರಾವೆಲ್ಸ್ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.ಮುಂಜಾನೆ 3 ಗಂಟೆ ಸುಮಾರಿಗೆ ಬಸ್ನಲ್ಲಿ ಮಲಗಿದ್ದ 23 ಪ್ರಯಾಣಿಕರು ಮಲಗಿದ್ದಲ್ಲೇ ಸಜೀವ ದಹನವಾಗಿದ್ದಾರೆ. ಆದರೆ, ಆ ಬಸ್ ಟೋಲ್ ದಾಟುವಾಗ ಹೈ ವೋಲ್ಟೇಜ್ ಲೈಟ್‌ಅನ್ನಯ ಹೈಬೀಮ್‌ನಲ್ಲೇ ಹಾಕಿಕೊಂಡೇ ಹೋಗಿತ್ತು. ಇದೀಗ ಟೋಲ್ ಪ್ಲಾಜಾದಲ್ಲಿ ಬಸ್ ಹೋಗಿರುವ ವಿಡಿಯೋ ಹೊರಬಿದ್ದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





