Breaking News

ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿತ….

ಚಿನ್ನ ಮತ್ತು ಬೆಳ್ಳಿಯ ಬೆಲೆ ಈ ವಾರ ಮತ್ತೆ ಕುಸಿಯುತ್ತಿದ್ದು, ಗರಿಷ್ಠ ಬೆಲೆಯ ಮಟ್ಟಕ್ಕೆ ಹೋಲಿಸಿದರೆ, ಭಾರೀ ಇಳಿಕೆಯಾಗಿದೆ. ಕಳೆದ ಶುಕ್ರವಾರವೂ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಗಣನೀಯ ಇಳಿಕೆ ದಾಖಲಾಗಿತ್ತು. ಇದೀಗ ಮತ್ತೆ ಚಿನ್ನದ ಬೆಲೆ ಇಳಿಕೆಯ ಹಾದಿಯಲ್ಲೇ ಸಾಗಿದ್ದು, ಸೋಮವಾರ ಮತ್ತಷ್ಟು ಇಳಿಕೆ ಕಂಡಿದೆ. ಜಾಗತಿಕ ಬೇಡಿಕೆಯಲ್ಲಿನ ಇಳಿಕೆಯಿಂದಾಗಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಈ ಕುಸಿತವು ಬರುತ್ತಿದೆ.

ಇಂದು ಸೋಮವಾರ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಚಿನ್ನದ ದರ ಸುಮಾರು ರೂ.120ರಷ್ಟು ಇಳಿಕೆಯಾಗಿದ್ದು, ಪ್ರತಿ 10 ಗ್ರಾಂಗೆ 59,192 ರೂ. ನಲ್ಲಿ ವಹಿವಾಟು ನಡೆಸುತ್ತಿದೆ. ಸೋಮವಾರದ ಮಾರುಕಟ್ಟೆಯಲ್ಲಿ ಚಿನ್ನವು ಕನಿಷ್ಠ 59172 ರೂ. ಮತ್ತು ಗರಿಷ್ಠ 59255 ರೂ. ನಲ್ಲಿ ವಹಿವಾಟು ನಡೆಸುತ್ತಿದೆ. ಈ ಚಿನ್ನದ ಬೆಲೆಗಳು ಆಗಸ್ಟ್ ವಿತರಣೆಗಾಗಿ ಫ್ಯೂಚರ್‌ ಬೆಲೆಯಾಗಿದೆ.

Share News

About BigTv News

Check Also

ಸಂಚಾರ ನಿಯಮ ಉಲ್ಲಂಘಿಸಿದ್ರೆ ಕೇಸ್ ಫಿಕ್ಸ್! 100% ಪ್ರಕರಣ ದಾಖಲಿಸಲು ಪೊಲೀಸರಿಗೆ ಖಡಕ್ ಸೂಚನೆ..

ಆಗಸ್ಟ್‌ನಲ್ಲಿ 100% ಸಾಧನೆ ಇಲ್ಲ! ಸಂಚಾರ ಪೊಲೀಸರಿಗೆ ಮೇಲಧಿಕಾರಿಗಳ ಖಡಕ್ ವಾರ್ನಿಂಗ್.. ನಿಯಮ ಉಲ್ಲಂಘನೆ ಕಂಡ್ರೆ ಕೇಸ್ ದಾಖಲಿಸಿ! ಪೊಲೀಸರಿಗೆ …

Leave a Reply

Your email address will not be published. Required fields are marked *