Breaking News

ಬೆಂಗಳೂರಿನಲ್ಲಿ ಶಾಲಾ ವಾಹನದ ಡೋರ್ ಓಪನ್; ರಸ್ತೆಗೆ ಬಿದ್ದ ಮಕ್ಕಳು –

ಬೆಂಗಳೂರು: ಕೆ.ಆರ್. ಪುರಂ ಸಮೀಪದ ಗಾಯತ್ರಿ ಲೇಔಟ್‌ನಲ್ಲಿ ಚಲಿಸುತ್ತಿದ್ದ ಶಾಲಾ ಓಮ್ನಿ ವಾಹನದ ಹಿಂಬದಿಯ ಡೋರ್ ಹಠಾತ್ ತೆರೆದುಕೊಂಡ ಪರಿಣಾಮ, ವಾಹನದಲ್ಲಿದ್ದ ಐವರು ಪುಟಾಣಿ ಮಕ್ಕಳು ರಸ್ತೆಗೆ ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಹಿಂಬದಿಯಿಂದ ಯಾವುದೇ ವೇಗದ ವಾಹನಗಳು ಬರದ ಕಾರಣ ದೊಡ್ಡ ಅನಾಹುತ ತಪ್ಪಿದ್ದು, ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಷ್ಟೇ ಆಗಿವೆ. ಸ್ಥಳೀಯರು ತಕ್ಷಣ ಮಕ್ಕಳಿಗೆ ನೆರವು ನೀಡಿದ್ದಾರೆ. ಘಟನೆಯ ಬಳಿಕ ಪೋಷಕರು ಹಾಗೂ ಸ್ಥಳೀಯರು ಚಾಲಕನ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣ ಸಂಬಂಧ ಕೆ.ಆರ್. ಪುರ ಸಂಚಾರಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share News

About BigTv News

Check Also

ಅಪ್ರಾಪ್ತ ವಯಸ್ಕ ಬಾಲಕಿ ಮೇಲಿನ ದೌರ್ಜನ್ಯ ಕೇಸ್: ಗ್ರಾಮದಲ್ಲಿ ಉದ್ವಿಗ್ನ ವಾತಾವರಣ, ಆರೋಪಿ ಮನೆ ಮೇಲೆ ದಾಳಿ

ಮುಂಡಗೋಡ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಿಸಿದ ಆರೋಪದ ಮೇಲೆ 65 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. …

Leave a Reply

Your email address will not be published. Required fields are marked *