Breaking News

ವಿದ್ಯಾರ್ಥಿನಿಗೆ ಕಿರುಕುಳ:ಬೈಕ್‌ ಟ್ಯಾಕ್ಸಿ ಚಾಲಕ ಸೆರೆ

ನೆರೆ ರಾಜ್ಯದ ವಿದ್ಯಾರ್ಥಿನಿಗೆ ಡ್ರಾಪ್‌ ಕೊಡುವ ಸಂದರ್ಭದಲ್ಲಿ ಅಸಭ್ಯವಾಗಿ ವರ್ತಿಸಿದ ಬೈಕ್‌ ಟ್ಯಾಕ್ಸಿ ಸವಾರನನ್ನು ವಿಲ್ಸನ್‌ ಗಾರ್ಡನ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಉಲ್ಲಾಳದ ಮುನಿಯಪ್ಪ ಲೇಔಟ್‌ನ ನಿವಾಸಿ ಲೋಕೇಶ್‌ (28) ಬಂಧಿತ ಆರೋಪಿ. ನ.6ರಂದು ಘಟನೆ ನಡೆದಿತ್ತು.ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಸುಧಾಮನಗರದ ಪಿಜಿಯೊಂದರಲ್ಲಿ ವಾಸವಾಗಿದ್ದ ವಿದ್ಯಾರ್ಥಿನಿ ಚರ್ಚ್‌ ಸ್ಟ್ರೀಟ್‌ ನಲ್ಲಿರುವ ಸ್ನೇಹಿತೆಯನ್ನು ನೋಡಲು ಹೋಗಿದ್ದರು. ವಾಪಸ್‌ ಪಿಜಿಗೆ ಬರಲು ಬೈಕ್‌ ಟ್ಯಾಕ್ಸಿ ಬುಕ್‌ ಮಾಡಿದ್ದರು. ಟ್ಯಾಕ್ಸಿ ಸವಾರ ಮಾರ್ಗಮಧ್ಯೆ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಪ್ರಶ್ನಿಸಿದಾಗ ಆಕೆಯ ಮೈಮುಟ್ಟಿ ಕಿರುಕುಳ ನೀಡಿದ್ದ. ವಿದ್ಯಾರ್ಥಿನಿ ತನ್ನ ಪಿಜಿ ತಲುಪಿದ ಬಳಿಕ ಸ್ಥಳದಲ್ಲಿದ್ದ ಸಂತ್ರಸ್ತೆಯ ಸ್ನೇಹಿತ ಟ್ಯಾಕ್ಸಿ ಸವಾರ ನನ್ನು ತರಾಟೆಗೆ ತೆಗೆದುಕೊಂಡಿದ್ದ. ಆರೋಪಿ ಕ್ಷಮೆ ಕೇಳಿ ಸ್ಥಳದಿಂದ ಹೋಗಿದ್ದ. ಘಟನೆ ವಿಡಿಯೋ ಮಾಡಿ ಕೊಂಡಿದ್ದ ವಿದ್ಯಾರ್ಥಿನಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ವಿಲ್ಸನ್‌ಗಾರ್ಡ್‌ನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *