Breaking News

ಬೆಂಜನಪದವು: ಯುವತಿ ನಾಪತ್ತೆ

ಬಂಟ್ವಾಳ: ಬೆಂಜನಪದವಿನ ಅತ್ತೆ ಮನೆಯಲ್ಲಿ ವಾಸವಿದ್ದ ಮುಂಬಯಿ ಮೂಲದ ಅವಿವಾಹಿತ ಯುವತಿಯೋರ್ವಳು ನ. 9ರಿಂದ ನಾಪತ್ತೆಯಾಗಿದ್ದಾಳೆ.ಬೆಂಜನಪದವು ಶಿವಾಜಿನಗರದಲ್ಲಿ ವಾಸವಿದ್ದ ಮರಿಯಾ ಆಲ್ಬರ್ಟ್ ಡಿ’ಸೋಜಾ ನಾಪತ್ತೆಯಾಗಿರುವ ಯುವತಿ. ಆಕೆಯ ಕುಟುಂಬ ಮುಂಬಯಿಯಲ್ಲಿ ನೆಲೆಸಿದ್ದು 1 ವರ್ಷದ ಹಿಂದೆ ತಾಯಿ ಮೃತಪಟ್ಟಿದ್ದರು.ಆದ್ದರಿಂದ ಆಕೆ ಕಳೆದ ಸ್ವಲ್ಪ ಸಮಯದಿಂದ ಅತ್ತೆ ಮೋಲಿ ಟೆಲ್ಲಿಸ್ ಮನೆಯಲ್ಲಿ ವಾಸವಿದ್ದಳು. ತಂದೆ ಆಲ್ಬರ್ಟ್ ಡಿ’ಸೋಜಾ ಮುಂಬಯಿಯಲ್ಲೇ ಇದ್ದಾರೆ. ನ. 9ರಂದು ಅತ್ತೆ ಚರ್ಚ್‌ಗೆ ಹೋಗಿದ್ದ ವೇಳೆ ಮರಿಯಾ ಮನೆ ಬಿಟ್ಟು ಹೋಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *