ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆದ ಭೀಕರ ಕಾರು ಬಾಂಬ್ ಸ್ಪೋಟದ ಹಿಂದಿನ ಕಾಣದ ಕೈಗಳು ಒಂದೊಂದಾಗಿ ಹೊರಬರುತ್ತಿವೆ. ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಆರಂಭಿಸಿರುವ ಜಮಾತ್-ಉಲ್-ಮೊಮಿನಾತ್ ಎಂಬ ಮಹಿಳಾ ವಿಭಾಗ, ಭಾರತದಲ್ಲೂ ತನ್ನ ಹೆಜ್ಜೆ ಮೂಡಲಾರಂಭಿಸಿದ್ದು, ಲಖನೌ ವೈದ್ಯೆ ಡಾ.ಶಾಹೀನ್ ಶಾಹೀದ್ ಬಂಧನ, ಈ ಮಹಿಳಾ ಕೆಡರ್‌ನ ಭಯಾನಕ ಚಹರೆಯನ್ನು ತೆರೆದಿಟ್ಟಿದೆ. ಈ ಮಧ್ಯೆ ದೆಹಲಿ ಸ್ಪೋಟಕ್ಕೂ ಮೊದಲು ಹರಿಯಾಣದ ಫರೀದಾಬಾದ್‌ನಲ್ಲಿ ಸಿಕ್ಕ ಭಾರೀ ಸ್ಪೋಟಕಗಳ ಕಳ್ಳಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಉತ್ತರ ಪ್ರದೇಶದ ಲಖನೌ ಮೂಲದ ವೈದ್ಯೆ ಡಾ. ಶಾಹೀನ್ ಶಾಹೀದ್ ಎಂಬಾಕೆಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಡಾ. ಶಾಹೀನ್ ಶಾಹೀದ್ ಜೈಶ್-ಎ-ಮೊಹಮ್ಮದ್ (ಜೆಎಂಎಂ) ಭಯೋತ್ಪಾದಕ ಸಂಘಟನೆಯ ಮಹಿಳಾ ವಿಭಾಗವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿದ್ದಳು ಎಂಬ ಸಂಗತಿ ಬಯಲಾಗಿದೆ. ಭಾರತದಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮಹಿಳಾ ವಿಭಾಗಕ್ಕೆ, ಮಹಿಳೆಯರನ್ನು ನೇಮಿಸಿಕೊಳ್ಳುವ ಮತ್ತು ಅವರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ಡಾ. ಶಾಹೀನ್ ಶಾಹೀದ್‌ಗೆ ವಹಿಸಲಾಗಿತ್ತು. ಫರೀದಾಬಾದ್‌ನಿಂದ ದೆಹಲಿಗೆ ಸ್ಪೋಟಕಗಳನ್ನು ಕಳ್ಳಸಾಗಾಣೆ ಮಾಡುವಲ್ಲಿಯೂ ಈಕೆಯ ಪಾತ್ರವಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

