Breaking News

13 ಕೆಜಿ ಗಾಂಜಾ ವಶಕ್ಕೆ ಪಡೆದ ಪೊಲೀಸರು: ಹೊಲದಲ್ಲಿ ಬೆಳೆದಿದ್ದ ಅಕ್ರಮ ಗಾಂಜಾ ಘಾಟು ಬೇಧಿಸಿದ ಖಾಕಿ

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಪ್ರತ್ಯೇಕ ಎರಡು ಪ್ರಕರಣದಲ್ಲಿ 13 ಕೆ.ಜೆ ಗಾಂಜಾ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಡವಾಡ ಗ್ರಾಮದಲ್ಲಿ ಆರೋಪಿತನಾದ ಹೇಮರೆಡ್ಡಿ ಯಲ್ಲಪ್ಪ ರಡ್ಡೇರ ಇತನು ತನ್ನ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 12 ಹಸಿ ಗಾಂಜಾ ಗಿಡಗಳು ಒಟ್ಟು ತೂಕ 7 ಕೆ.ಜಿ. 40 ಗ್ರಾಂ ಗಾಂಜಾವನ್ನು ದಾಳಿ ಮಾಡಿ ವಶಪಡಿಸಿಕೊಂಡು ಪೊಲೀಸರು ಜಪ್ತಿ ಮಾಡಿದ್ದಾರೆ.

ಇನ್ನೂ ಶಿರಗುಪ್ಪಿ ಗ್ರಾಮದಲ್ಲಿ ಆರೋಪಿತನಾದ ಶಿವಯ್ಯ ಅಂದಾನಯ್ಯ ಮಂಟೂರ ಎಂಬಾತನು ತನ್ನ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 28 ಹಸಿ ಗಾಂಜಾ ಗಿಡಗಳ ಒಟ್ಟು ತೂಕ 6 ಕೆ.ಜಿ. 785 ಗ್ರಾಂ ನ್ನು ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ, ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About Shaikh BigTv

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *