Breaking News

ಮಂಗಳೂರು – ಕೆಲಸಕ್ಕೆಂದು ತೆರಳಿದ್ದ ಯುವತಿ ನಾಪತ್ತೆ

ಕೆಲಸಕ್ಕೆಂದು ನವೆಂಬರ್ 11 ರಿಂದ ಮನೆಯಿಂದ ತೆರಳಿದ್ದ ಯುವತಿಯೊಬ್ಬಳು ನಾಪತ್ತೆಯಾಗಿರುವ ಕುರಿತಂತೆ ದೂರು ದಾಖಲಾಗಿದೆ. ನಾಪತ್ತೆಯಾದ ಯುವತಿಯನ್ನು ಜಪ್ಪು ಸೂಟರ್ ಪೇಟೆಯ ನಿವಾಸಿ ಕುಮಾರ್ ಅವರ ಪತ್ನಿ ಸುಮಾ ಎನ್. (24) ಎಂದು ಗುರುತಿಸಲಾಗಿದೆ.ಸುಮಾ ಅವರು ಸೋಮವಾರ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಲು ಮನೆಯಿಂದ ಹೊರಟಿದ್ದರು, ಆದರೆ ಅವರು ಕೆಲಸದ ಸ್ಥಳವನ್ನು ತಲುಪಿಲ್ಲ. ಅವರ ಪತಿ ಕುಮಾರ್ ಅವರು ಸುಮಾ ಅವರಿಗೆ ಕರೆ ಮಾಡಲು ಪ್ರಯತ್ನಿಸಿದಾಗ, ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ಸಂಬಂಧಿಕರು ಮತ್ತು ಸ್ನೇಹಿತರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಕಾರಣ, ಕುಮಾರ್ ಅವರು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *