Breaking News

ಬೀದರ್‌: ಬ್ರಿಮ್ಸ್‌ ವೈದ್ಯನಿಗೆ ತೀವ್ರ ಹಲ್ಲೆ, 7 ಜನ ವಶಕ್ಕೆ

ಬೀದರ್ ನಗರದ ಬ್ರಿಮ್ಸ್‌ನಲ್ಲಿ ಕರ್ತವ್ಯನಿರತ ವೈದ್ಯನ ಮೇಲೆ ಯುವಕರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದ್ದು ಹಲ್ಲೆ ಮಾಡಿದ 7 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಬೆನಕನಳ್ಳಿ ವಿಜಯಸಿಂಗ್‌ ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದು ಚಿಕಿತ್ಸೆಗಾಗಿ ರಾತ್ರಿ 1 ಗಂಟೆಗೆ ಬ್ರಿಮ್ಸ್‌ಗೆ ಕರೆತರಲಾಗಿತ್ತು. ಕರ್ತವ್ಯದಲ್ಲಿದ್ದ ಡಾ. ತುಕಾ ರಾಮ ಚಿಕಿತ್ಸೆ ನೀಡಿ, ಸ್ಕ್ಯಾನಿಂಗ್ ಗೆ ಕಳಿಸಿದ್ದರು. ಸ್ಕ್ಯಾನಿಂಗ್‌ನಲ್ಲಿದ್ದ ಸಿಬ್ಬಂದಿ, ಚೀಟಿ ಮೇಲೆ ವೈದ್ಯ ರಿಂದ “ಎಂಎಲ್‌ಸಿ’ ಎಂದು ಬರೆಸಿ ಕೊಳ್ಳುವಂತೆ ವಿಜಯ ಸಿಂಗ್‌ ಗೆಳೆಯರಿಗೆ ಹೇಳಿದ್ದಾರೆ. ಬಳಿಕ ಅವರೆಲ್ಲ ಚೀಟಿ ಮೇಲೆ ಎಂಎಲ್‌ಸಿ ಎಂದು ಏಕೆ ಬರೆದು ಕೊಟ್ಟಿಲ್ಲ ಎಂದು ಪ್ರಶ್ನಿಸಿ ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *