Breaking News

ಉಕ್ಕಿ ಹರಿಯುತ್ತಿರುವ ನೇತ್ರಾವತಿ, ಕುಮಾರಧಾರ ನದಿಗಳು ಐತಿಹಾಸಿಕ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇಗುಲದಲ್ಲಿ ಸಂಗಮ ಸಾಧ್ಯತೆ

ಮಂಗಳೂರು: ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೇತ್ರಾವತಿ, ಕುಮಾರಧಾರ ನದಿಗಳು ಉಕ್ಕಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ
ಉಭಯ ನದಿಗಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ
ಐತಿಹಾಸಿಕ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇಗುಲದ ಬಳಿ ಸಂಗಮ ಸಾಧ್ಯತೆ ಹೆಚ್ಚಾಗಿದೆ.
ಈ ಐತಿಹಾಸಿಕ ಕ್ಷಣ ನೋಡಲು ಭಕ್ತಾಧಿಗಳ ಕಾತುರದಿಂದ ಕಾಯುತ್ತಿದ್ದಾರೆ.
ನೇತ್ರಾವತಿ ನದಿಗಳ ಅಪಾಯದ ಮಟ್ಟ 30.5 ಮೀ ಮೀರಿದ್ದು, ಸದ್ಯ ನೇತ್ರಾವತಿ ನದಿಯಲ್ಲಿ 30 ಮೀಟರ್ ನಲ್ಲಿ ನೀರು ಹರಿಯುತ್ತಿದೆ.
ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ ಕೇವಲ ಒಂದು ಮೆಟ್ಟಿಲು ಮಾತ್ರ ಕಾಣಿಸುತ್ತಿದೆ.
ಉಭಯ ನದಿಗಳಲ್ಲಿ ಇನ್ನಷ್ಟು ನೀರು ಹರಿದು ಬಂದು ದೇವಾಲಯದ ಆವರಣದೊಳಗಡೆ ನೆರೆ ನೀರು ಪ್ರವೇಶಿಸಿದರೆ ಸಂಗಮ ಆಗುವ ಸಾಧ್ಯತೆಯಿದೆ.
ಸಂಗಮದ ಬಳಿಕ ದೇವಾಲಯದ ವತಿಯಿಂದ ಗಂಗಾಪೂಜೆ ನಡೆಯುತ್ತದೆ. ಬಳಿಕ
ದೇಗುಲದಲ್ಲಿ ಭಕ್ತಾಧಿಗಳು ಸಂಗಮ ಸ್ನಾನವನ್ನು ಮಾಡಬೇಕು ಎಂಬ ಪ್ರತೀತಿ ಇದೆ.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *