Breaking News

ಭತ್ತದ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ಮುಳಬಾಗಿಲು ತಾಲ್ಲೂಕಿನ ದೊಡ್ಡ ಗೊಲ್ಲಹಳ್ಳಿ ಗ್ರಾಮದ ಶ್ಯಾಮಲಮ್ಮ( 45) ಮೃತರು. ಈ ಮಹಿಳೆಯು ದೊಡ್ಡ ಗೊಲ್ಲಹಳ್ಳಿ ಗ್ರಾಮದ ಗಂಗಾಧರಪ್ಪ ಎಂಬುವವರ ಬಳಿ ಭತ್ತದ ತೆನೆ ಕಟಾವು ಮಾಡುವ ಕೂಲಿ ಕೆಲಸಕ್ಕೆಂದು ಹೋಗಿದ್ದರು.ಸಂಜೆ 4 ಗಂಟೆಯ ಸಮಯದಲ್ಲಿ ಭತ್ತದ ತೆನೆಯ ಕಟ್ಟನ್ನು ಯಂತ್ರಕ್ಕೆ ಹಾಕಲು ಯಂತ್ರದ ಸಮೀಪಕ್ಕೆ ಹೋಗಿದ್ದಾರೆ. ಆಗ ಅವರ ಸೀರೆಯು ಯಂತ್ರದ ಪಿಡಿ ಸಾಫ್ಟ್ ಜಾಯಿಂಟ್‌ಗೆ ತಗುಲಿಕೊಂಡಿದೆ. ನಂತರ ತಲೆಯು ಸಾಫ್ಟ್ ಜಾಯಿಂಟ್‌ಗೆ ಸಿಲುಕಿ ಕತ್ತು ತುಂಡಾಗಿ ಸ್ಥಳದಲ್ಲೇ ಮೃತಪಟ್ಟರು.ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಂಗಲಿ ಪೊಲೀಸ್ ಠಾಣೆ ಪಿಎಸ್‌ಐ ಎಚ್.ಡಿ.ವಿದ್ಯಾಶ್ರೀ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *