Breaking News

ಡ್ರಾಪ್ ಕೊಡುವ ನೆಪದಲ್ಲಿ ಹೆದ್ದಾರಿಯಲ್ಲಿ ದರೋಡೆ : ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಅರೆಸ್ಟ್.!

ಬೆಂಗಳೂರಿನ ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳನ್ನು ಮಂಡ್ಯ ಪೊಲೀಸರು ಬಂಧಿಸಿದ್ದು, ಬಂ‍ಧಿತರನ್ನ ಕಿರಣ್, ಕುಶಾಲ್ ಬಾಬು, ಗೋಕುಲ್ ಎಂದು ಗುರುತಿಸಲಾಗಿದೆ.ಈ ಮೂವರು ವಿದ್ಯಾರ್ಥಿಗಳು ಹಣ ಮಾಡುವ ಉದ್ದೇಶದಿಂದ ರಾಬರಿಗೆ ಇಳಿದಿದ್ದರು. ಬ್ಯಸಿನೆಸ್ ನೆಪದಲ್ಲಿ ಒಂದಾಗಿದ್ದ ಮೂವರು ದರೋಡೆ ಮಾಡಲು ಹೊರ ರಾಜ್ಯದ ಕಾರು ಬಾಡಿಗೆಗೆ ಪಡೆದಿದ್ದರು. ಬಸ್ ನಿಲ್ದಾಣದ ಬಳಿ ಬಸ್ ಕಾಯುವವರ ಬಳಿ ಹೋಗಿ ಡ್ರಾಪ್ ಕೊಡುವ ನೆಪದಲ್ಲಿ ಸಾರ್ವಜನಿಕರ ಕುತ್ತಿಗೆಗೆ ಹಗ್ಗ ಹಾಕಿ ಅವರನ್ನು ಹೆದರಿಸಿ ಅವರ ಬಳಿ ಇರುವ ಚಿನ್ನ, ಹಣ ಎಗರಿಸಿ ಪರಾರಿಯಾಗುತ್ತಿದ್ದರು. ಬಂದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದರು. ಸದ್ಯ ಮೂವರು ವಿದ್ಯಾರ್ಥಿಗಳನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *